Monday, October 12, 2026

Dasara Wishes

Happy Dasara
Home Front Page ಮೈಸೂರಿನಲ್ಲಿ ದೇವರಾಜ ಅರಸು ಪ್ರತಿಮೆ ನಿರ್ಮಾಣ: ಸಾಮಾಜಿಕ ಬದ್ಧತೆಯ ಹೋರಾಟಕ್ಕೆ ಬೆಂಬಲಿಸುವಂತೆ ಸುತ್ತೂರು ಶ್ರೀಗಳಿಗೆ ಮನವಿ.

ಮೈಸೂರಿನಲ್ಲಿ ದೇವರಾಜ ಅರಸು ಪ್ರತಿಮೆ ನಿರ್ಮಾಣ: ಸಾಮಾಜಿಕ ಬದ್ಧತೆಯ ಹೋರಾಟಕ್ಕೆ ಬೆಂಬಲಿಸುವಂತೆ ಸುತ್ತೂರು ಶ್ರೀಗಳಿಗೆ ಮನವಿ.

ಮೈಸೂರು,ಜುಲೈ,1,2021(www.justkannada.in): ದೇವರಾಜ ಅರಸು ಪ್ರತಿಮೆಯನ್ನು  ಮೈಸೂರಿನ ನೂತನ ಜಿಲ್ಲಾಧಿಕಾರಿಗಳ ಕಟ್ಟಡದ ಆವರಣದಲ್ಲಿ ನಿರ್ಮಾಣ ಮಾಡುವವಂತೆ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಿಗೆ ಸಮಿತಿಯ ವತಿಯಿಂದ ಮನವಿಯನ್ನು ನೀಡಿದ್ದೇವೆ. ಈ ಸಾಮಾಜಿಕ ಬದ್ಧತೆಯ ಹೋರಾಟಕ್ಕೆ ಬೆಂಬಲಿಸುವಂತೆ ಸುತ್ತೂರು ಶ್ರೀಗಳಿಗೆ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.jk

ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ  ಅಧ್ಯಕ್ಷ ಜಾಕೀರ್ ಹುಸೇನ್ ನೇತೃತ್ವದಲ್ಲಿ  ಇಂದು ಸುತ್ತೂರು ಶಾಖಮಠಕ್ಕೆ ಭೇಟಿ ಶ್ರೀಗಳನ್ನು ಭೇಟಿ ಮಾಡಿ ಮೈಸೂರಿನಲ್ಲಿ ದೇವರಾಜ ಅರಸು ಪ್ರತಿಮೆಯನ್ನು  ಮೈಸೂರಿನ ನೂತನ ಜಿಲ್ಲಾಧಿಕಾರಿಗಳ ಕಟ್ಟಡದ ಆವರಣದಲ್ಲಿ ನಿರ್ಮಾಣ ಮಾಡುವವಂತೆ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಿಗೆ ಸಮಿತಿಯ ವತಿಯಿಂದ ಮನವಿಯನ್ನು ನೀಡುದ್ದೇವೆ. ಮನವಿಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ .ಹೀಗಾಗಿ ಈ ಒಂದು ಸಾಮಾಜಿಕ ಬದ್ಧತೆಯ ನಮ್ಮ  ಹೋರಾಟಕ್ಕೆ  ನಿಮ್ಮ ಬೆಂಬಲ ಮತ್ತು ಆಶೀರ್ವಾದ ನೀಡುವಂತೆ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ ವತಿಯಿಂದ ವಿನಂತಿಸಲಾಯಿತು. ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ ರಾಜ್ಯ ಪ್ರಧಾನ ಸಂಚಾಲಕರಾದ ಡೈರಿ ವೆಂಕಟೇಶ್ ಉಪಸ್ಥಿತರಿದ್ದರು.