Sunday, August 9, 2026

BDA Apartments

Home Front Page ಒಂದು ತಿಂಗಳ ಬಳಿಕ ಬಿಎಸ್ ವೈ ಸರ್ಕಾರ ಪತನ- ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಭವಿಷ್ಯ.

ಒಂದು ತಿಂಗಳ ಬಳಿಕ ಬಿಎಸ್ ವೈ ಸರ್ಕಾರ ಪತನ- ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಭವಿಷ್ಯ.

ಮೈಸೂರು,ಜೂನ್,27,2021(www.justkannada.in): ಒಂದು ತಿಂಗಳ ಬಳಿಕ ಬಿಎಸ್ ಯಡಿಯೂರಪ್ಪ ಸರ್ಕಾರ ಪತನವಾಗಲಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಭವಿಷ್ಯ ನುಡಿದರು.jk

ರಾಜ್ಯದಲ್ಲಿ ಮದ್ಯ ಬೆಲೆ ಏರಿಕೆ ಹಿನ್ನೆಲೆ, ಮದ್ಯಪ್ರಿಯರ ಬೆಂಬಲಕ್ಕೆ ನಿಂತ ವಾಟಾಳ್ ನಾಗರಾಜ್ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿ ಮದ್ಯದ ಬಾಟಲಿ ಹಿಡಿದು ಸರ್ಕಾರಕ್ಕೆ ಮದ್ಯ ಅಭಿಷೇಕ ಮಾಡುವ ಎಚ್ಚರಿಕೆ ನೀಡಿದರು.

ಸರ್ಕಾರ ಮದ್ಯ ಮಾರಾಟ ಮಾಡುವುದನ್ನ ಸಂಪೂರ್ಣ ನಿಲ್ಲಿಸಬೇಕು. ಇಲ್ಲದಿದ್ದರೆ ಕಡಿಮೆ ಬೆಲೆಯಲ್ಲಿ ಮದ್ಯ ನೀಡಬೇಕು. ನಾನು ಮದ್ಯ ಕುಡಿಯೋದಿಲ್ಲ ಆದರೆ ಸಾಂಕೇತಿಕ ಬೆಂಬಲ ನೀಡುತ್ತೇನೆ. ಸರ್ಕಾರ ಮದ್ಯದ ಬೆಲೆ ಕಡಿಮೆ ಮಾಡಿಲಿಲ್ಲ ಅಂದರೆ ಸರ್ಕಾರಕ್ಕೆ ಮದ್ಯ ಅಭಿಷೇಕ ಮಾಡುತ್ತೇವೆ ಎಂದು ಹೇಳಿದರು.

ಯಡಿಯೂರಪ್ಪ  ಭ್ರಷ್ಟರಲ್ಲೇ ಭ್ರಷ್ಟ ಸಿಎಂ. ಜೈಲಿಗೆ ಹೋಗಿ ಬಂದ ಮೊದಲ ಸಿಎಂ.  ವಿಧಾನಸೌಧದಲ್ಲಿ ಭ್ರಷ್ಟರ ಕೂಟವೇ ಇದೆ. ರಾಜಕೀಯ ಕಾರಣಕ್ಕೆ ಇದೀಗ ಬಸವಣ್ಣನವರ ಪುತ್ಥಳಿ ನಿರ್ಮಿಸಲು ಹೊರಟಿದ್ದಾರೆ. ವಿಧಾನಸೌಧದಲ್ಲಿ ಈಗಾಗಲೇ ಬಸವಣ್ಣನವರ ಪುತ್ಥಳಿ ಇದೆ. ಈ ನಡುವೆ ಮತ್ತೊಂದು ಪುತ್ಥಳಿ ನಿರ್ಮಾಣದ ಅವಶ್ಯಕತೆ ಇಲ್ಲ. ಒಬ್ಬ ಭ್ರಷ್ಟ ಸಿಎಂ ವಿಶ್ವಮಾನವ ಬಸವಣ್ಣನವರ ಪುತ್ಥಳಿ ನಿರ್ಮಾಣ ಮಾಡುವುದು ಅಪಮಾನ ಮಾಡಿದಂತೆ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದರು.

Key words:  fall – BSY-government – month –mysore-kannada fighter-Vatal Nagaraj