Friday, August 21, 2026

BDA Apartments

Home Front Page ನಾಳೆ ಮೈಸೂರು ವಿವಿ ಸಿಬ್ಬಂದಿಗೆ ಉಚಿತ ಕೋವಿಡ್ ಲಸಿಕಾ ಕಾರ್ಯಕ್ರಮ.

ನಾಳೆ ಮೈಸೂರು ವಿವಿ ಸಿಬ್ಬಂದಿಗೆ ಉಚಿತ ಕೋವಿಡ್ ಲಸಿಕಾ ಕಾರ್ಯಕ್ರಮ.

ಮೈಸೂರು,ಜೂನ್,20,2021(www.justkannada.in): ನಾಳೆ(ಜೂನ್ 21) ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ  ವಿವಿಯ 18 ರಿಂದ 44 ವರ್ಷದ ಒಳಗಿನ ಎಲ್ಲಾ ಸಂಶೋಧಕರಿಗೆ, ಅತಿಥಿ ಉಪನ್ಯಾಸಕರಿಗೆ ಹಾಗೂ ನೌಕರರಿಗೆ,  45 ವರ್ಷ ಮೇಲ್ಪಟ್ಟವರಿಗೆ ಸಹ ಉಚಿತ ಕರೋನಾ ಲಸಿಕಾ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಬೆಳಗ್ಗೆ  11,00 ಗಂಟೆಗೆ ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯಲ್ಲಿ (DOWNS) ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಹಾರಾಜ ಕಾಲೇಜಿನಲ್ಲಿ ಉಚಿತ ಲಸಿಕಾ ಕಾರ್ಯಕ್ರಮವನ್ನ ಏರ್ಪಡಿಸಲಾಗಿದೆ.  ಈ ಕಾರ್ಯಕ್ರಮಕ್ಕೆ ಸಂಸದರು,  ಕುಲಪತಿಗಳು  ಕುಲಸಚಿವರು ಹಾಗೂ ನಮ್ಮ ವಿಶೇಷ ಅಧಿಕಾರಿಗಳು ಎಲ್ಲರೂ ಸಹ ಪಾಲ್ಗೊಳ್ಳುತ್ತಿದ್ದಾರೆ.

Key words: Free- covid vaccine- program – Mysore university- staff- tomorrow.