Sunday, August 2, 2026

BDA Apartments

Home Front Page ಕೋವಿಡ್ ಸೆಂಟರ್ ನಲ್ಲಿ ಕೊರೋನಾ ಸೋಂಕಿತರಿಗೆ ನಿತ್ಯ ಯೋಗಭ್ಯಾಸ.

ಕೋವಿಡ್ ಸೆಂಟರ್ ನಲ್ಲಿ ಕೊರೋನಾ ಸೋಂಕಿತರಿಗೆ ನಿತ್ಯ ಯೋಗಭ್ಯಾಸ.

ಮೈಸೂರು,ಜೂನ್,15,2021(www.justkannada.in): ಕೊರೊನಾ ಸೋಂಕಿತರಿಗೆ ಆತ್ಮಬಲ ತುಂಬುವ  ಉದ್ದೇಶದಿಂದ ಮೈಸೂರಿನ ಮಂಡಕಳ್ಳಿಯಲ್ಲಿರುವ ಕೋವಿಡ್ ಸೆಂಟರ್ ನಲ್ಲಿ ಕೂರೂನಾ ಸೋಂಕಿತರಿಗೆ ನಿತ್ಯ ಯೋಗ ಮಾಡಿಸಲಾಗುತ್ತಿದೆ.jk

ಇಲ್ಲಿನ ಕೂರೋನಾ ಸೋಂಕಿತರಿಗೆ ಪ್ರತಿದಿನ ಸಂಜೆ 6.30 ರಿಂದ 7.30 ವರೆಗೆ ನುರಿತ ಯೋಗ ಶಿಕ್ಷಕರಾದ ನಾಗನಂದಿನಿ ಹಾಗೂ ಆನಂದ್ ಜಿ ಅವರಿಂದ ನಿರಂತರವಾಗಿ ಯೋಗ ತರಬೇತಿಯನ್ನ ನೀಡಲಾಗುತ್ತಿದೆ.  ವ್ಯಕ್ತಿ ವಿಕಾಸನ ಕೇಂದ್ರದಿಂದ ಆತ್ಮಬಲ , ಮನೋಸ್ಥೈರ್ಯ ದೈಹಿಕ ಬಲ ಹೆಚ್ಚಿಸುವಂತೆ ,ಯೋಗಾಭ್ಯಾಸ  ಪ್ರಾಣಾಯಾಮ ,ಧ್ಯಾನ , ಓಂಕಾರ ಉಪಾಸನೆಯನ್ನ  ಮಾಡಿಸಲಾಗುತ್ತಿದೆ.

ಕೋವಿಡ್ ಸೋಂಕಿತರು ಶೀಘ್ರ ಗುಣಮುಖರಾಗುವಂತೆ ಮಾಡಲು ಈ ಯೋಗಾಭ್ಯಾಸ ನಡೆಸಲಾಗುತ್ತಿದ್ದು,  ಈ ಕಾರ್ಯಕ್ಕೆ ಜಿಲ್ಲಾಡಳಿತ ಹಾಗೂ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Key words: Yoga – Corona- Infected – covid Center-mysore