ಮೈಸೂರಿನಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಉಚಿತ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ.

ಮೈಸೂರು,ಜೂನ್,15,2021(www.justkannada.in): ಕೋವಿಡ್ ಮುಕ್ತ ಮೈಸೂರು ನಗರ ಮಾಡಲು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಪಣ ತೊಟ್ಟಿದ್ದು ಈ ಮಧ್ಯೆ ನಗರದಲ್ಲಿ ರಸ್ತೆ ಬದಿ ವ್ಯಾಪಾರಿಗಳಿಗೆ  ಉಚಿತ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ ಮಾಡಲಾಯಿತು.jk

ಕೃಷ್ಣರಾಜ ಕ್ಷೇತ್ರದ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ನಗರದ ಚಾಮುಂಡಿಪುರಂ, ವಿದ್ಯಾರಣ್ಯ ಪುರಂ, ನಂಜುಮಳಿಗೆ, ಸೇಂಟ್ ಮೇರಿಸ್ ವೃತ್ತ, ಫೈಲೆಟ್ ವೃತ್ತದಲ್ಲಿ ರಸ್ತೆ ಬದಿಯವ್ಯಾಪಾರಿಗಳಿಗೆ ಉಚಿತವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ ಮಾಡಲಾಯಿತು.

ಇದೇ ವೇಳೆ ಕಡ್ಡಾಯ ಮಾಸ್ಕ್ ಧರಿಸಿ ಕೋವಿಡ್ ನಿಯಮ ಪಾಲಿಸುವಂತೆ  ಕಾರ್ಯಕರ್ತರು ಕರೆ ನೀಡಿದರು. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಜೋಗಿ ಮಂಜು ನೇತೃತ್ವದಲ್ಲಿ ಕೊರೋನಾ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ನಗರ ಪಾಲಿಕೆ ಸದಸ್ಯರಾದ ಮಾ.ವಿ.ರಾಮಪ್ರಸಾದ್ ಕೆ.ಅರ್.ಕ್ಷೇತ್ರದ ಬಿಜೆಪಿ ಅಧ್ಯಕ್ಷ ಶಿವಪ್ಪ, ನಗರ ಪ್ರದಾನ ಕಾರ್ಯದರ್ಶಿ ಗೋಪಾಲ್ ಇತರರಿ ಇದ್ದರು.

Key words: Free Mask- Sanitizer -Distribution – BJP – Mysore.