Sunday, August 23, 2026

BDA Apartments

Home Cinema ನಟ ಸಂಚಾರಿ ವಿಜಯ್ ಬದುಕುವ ಸಾಧ್ಯತೆ ಕಡಿಮೆ: ಅಂಗಾಗ ದಾನ ಮಾಡಲು ಕುಟುಂಬಸ್ಥರಿಂದ ನಿರ್ಧಾರ.

ನಟ ಸಂಚಾರಿ ವಿಜಯ್ ಬದುಕುವ ಸಾಧ್ಯತೆ ಕಡಿಮೆ: ಅಂಗಾಗ ದಾನ ಮಾಡಲು ಕುಟುಂಬಸ್ಥರಿಂದ ನಿರ್ಧಾರ.

ಬೆಂಗಳೂರು,ಜೂನ್,14,2021(www.justkannada.in): ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ  ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ‌ʼಸಂಚಾರಿʼ ವಿಜಯ್ ಬದುಕುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿಜಯ್ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.jk

ಈ ಬಗ್ಗೆ ತಮ್ಮ ದುಃಖ ಹಂಚಿಕೊಂಡಿರುವ ನಟ ವಿಜಯ್ ಸಹೋದರ ಸಿದ್ಧೇಶ್, ನನಗೆ ಅಣ್ಣನೇ ಸ್ಪೂರ್ತಿ, ಶಕ್ತಿ.  ಬದುಕುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಅಂಗಾಂಗ ದಾನ ಮಾಡಲು ನಿರ್ಧಾರ ಮಾಡಿಲಾಗಿದೆ. ಅಣ್ಣನ ಅಂಗಾಂಗಗಳು ಸಮಾಜಕ್ಕೆ ಸಿಗಲಿ. ಚಿಕಿತ್ಸೆಗೆ ನೆರವು ನೀಡಿದವರಿಗೆ,ಡಿಸಿಎಂ ಅಶ್ವಥ್ ನಾರಾಯಣ್ ಅವರಿಗೆ ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.

ಇನ್ನು ನಟ ನೀನಾಸಂ ಸತೀಶ್ ಮಾತನಾಡಿ ವಿಜಯ್  ಕೇವಲ ನಟನೆ ಮಾಡುತ್ತಿರಲಿಲ್ಲ. ಸಮಾಜಸೇವೆಯನ್ನ ಮಾಡುತ್ತಿದ್ದರು. ವಿಜಯ್ ಇಲ್ಲದಿದ್ರೆ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಭಾವುಕರಾದರು.

Key words: Actor -sanchari Vijay – health condition -serious