Monday, September 28, 2026

BDA Apartments

ತೆರಿಗೆ ಕಟ್ಟಲು ಕಷ್ಟ ಪಡುವಷ್ಟು ಸಂಕಷ್ಟವೇ ಕಂಗನಾಗೆ?! BDA JK_Adv BDA Adv
Home Cinema ತೆರಿಗೆ ಕಟ್ಟಲು ಕಷ್ಟ ಪಡುವಷ್ಟು ಸಂಕಷ್ಟವೇ ಕಂಗನಾಗೆ?!

ತೆರಿಗೆ ಕಟ್ಟಲು ಕಷ್ಟ ಪಡುವಷ್ಟು ಸಂಕಷ್ಟವೇ ಕಂಗನಾಗೆ?!

ಬೆಂಗಳೂರು, ಜೂನ್ 10, 2021 (www.justkannada.in): ತೆರಿಗೆ ಪಾವತಿ ಕುರಿತು ನಟಿ ಕಂಗನಾ ಅಳಲು ತೋಡಿಕೊಂಡಿದ್ದಾರೆ.

ಹೌದು. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕಂಗನಾ, ಕಂಗನಾ ಕಳೆದ ವರ್ಷದ ತೆರಿಗೆಯಲ್ಲಿ ಅರ್ಧದಷ್ಟನ್ನು ಮಾತ್ರ ಪಾವತಿ ಮಾಡಿದ್ದು, ಈ ಬಾರಿ ನನಗೆ ತೆರಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಇನ್ ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ, ನನ್ನ ಒಟ್ಟು ಆದಾಯದಲ್ಲಿ ಶೇ. 45ರಷ್ಟು ತೆರಿಗೆ ಪಾವತಿಸುತ್ತೇನೆ. ನಾನು ಅತೀ ಹೆಚ್ಚು ತೆರಿಗೆ ಪಾವತಿಸುವ ನಟಿಯಾಗಿದ್ದೇನೆ. ಆದರೆ ಕೆಲಸ ಇಲ್ಲದೆ, ಕಳೆದ ವರ್ಷ ಅರ್ಧದಷ್ಟು ತೆರಿಗೆಯನ್ನು ಪಾವತಿಸಿದ್ದೇನೆ ಎಂದು ಹೇಳಿದ್ದಾರೆ.

ತೆರಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿದ್ದು, ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಎಂದಿದ್ದಾರೆ.