Saturday, August 8, 2026

BDA Apartments

Home Front Page ದಕ್ಷಿಣ ಆಫ್ರಿಕಾದಲ್ಲಿ ವಂಚನೆ ಪ್ರಕರಣ: ಗಾಂಧಿ ಮರಿಮೊಮ್ಮಗಳಿಗೆ ಜೈಲುಶಿಕ್ಷೆ

ದಕ್ಷಿಣ ಆಫ್ರಿಕಾದಲ್ಲಿ ವಂಚನೆ ಪ್ರಕರಣ: ಗಾಂಧಿ ಮರಿಮೊಮ್ಮಗಳಿಗೆ ಜೈಲುಶಿಕ್ಷೆ

ಬೆಂಗಳೂರು, ಜೂನ್ 08, 2021 (www.justkannada.in): ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾತ್ಮ ಗಾಂಧಿ ಮರಿ ಮೊಮ್ಮಗಳಿಗೆ ದಕ್ಷಿಣ ಆಫ್ರಿಕಾದಲ್ಲಿ ಜೈಲು ಶಿಕ್ಷೆ ವಿಧಿಸಲಾಗಿದೆ.

ಗಾಂಧಿ ಮರಿಮೊಮ್ಮಗಳಾದ ಆಶಿಶ್ ಲತಾ ರಾಮ್‌ಗೋಬಿನ್ (56) ಶಿಕ್ಷೆಗೊಳಗಾದವರು. ಇವರನ್ನು ನ್ಯಾಯಾಲಯ ಸೋಮವಾರ ತಪ್ಪಿತಸ್ಥರೆಂದು ಪರಿಗಣಿಸಿದೆ.

ಆರು ದಶಲಕ್ಷ ರ್ಯಾಂಡ್ ವಂಚನೆ ಮತ್ತು ಖೋಟಾ ಪ್ರಕರಣದಲ್ಲಿ ಆರೋಪಿಯಾಗಿದ್ದ ಇವರಿಗೆ ಡರ್ಬನ್ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಭಾರತದಿಂದ ಅಕ್ರಮವಾಗಿ ಸಾಗಾಟಕ್ಕೆ ಅನುವಾಗಲು ಆಮದು ಮತ್ತು ಕಸ್ಟಮ್ಸ್ ಸುಂಕವನ್ನು ತೆರವುಗೊಸುವ ಬಗ್ಗೆ ಉದ್ಯಮಿ ಎಸ್.ಆರ್. ಮಹಾರಾಜ್ ಅವರಿಗೆ ಲಾಭದ ಪಾಲು ನೀಡುವ ಭರವಸೆ ನೀಡಿದ ಆರೋಪ ಆಕೆಯ ಮೇಲಿದೆ.