Tuesday, September 22, 2026

BDA Apartments

MYSORE: ರಾಜಾ ಕಾಲುವೆ ಮೇಲೆ ಅಕ್ರಮ ಕಟ್ಟಡ ತೆರುವು BDA JK_Adv BDA Adv
Home Front Page ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ! ಹಳದಿ ಲೋಹದ ದರ ಕೊಂಚ ಇಳಿಕೆ

ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ! ಹಳದಿ ಲೋಹದ ದರ ಕೊಂಚ ಇಳಿಕೆ

ಬೆಂಗಳೂರು, ಜೂನ್ 08, 2021 (www.justkannada.in): ಚಿನ್ನಾಭರಣ ದರದಲ್ಲಿ ಕೊಂಚ ಇಳಿಕೆಯಾಗಿದೆ.

ಹೌದು. ಆಭರಣ ಪ್ರಿಯರಿಗೆ ಸಿಹಿಸುದ್ದಿ ಇಲ್ಲಿದೆ. ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಲೇ ಇದ್ದ ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಂದು ಇಳಿಕೆಯಾಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,800 ರೂ. ಗೆ ಇಳಿಕೆಯಾಗಿದೆ. 100 ಗ್ರಾಂ ಚಿನ್ನ 4,58,000 ರೂ.ಗೆ ಕುಸಿತ ಕಂಡಿದೆ. ಬೆಳ್ಳಿ ಬೆಲೆಯಲ್ಲೂ ಸಹ ಇಂದು ಇಳಿಕೆ ಕಂಡುಬಂದಿದೆ.

1 ಕೆಜಿ ಬೆಳ್ಳಿ ದರ 71,000 ರೂ. ಆಗಿದೆ. ಚಿನ್ನ ಮತ್ತು ಬೆಳ್ಳಿ ದರ ಎರಡೂ ಆಭರಣಗಳು ಕೂಡ ಇಳಿಕೆ ಕಂಡುಬಂದಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಚಿನ್ನದ ದರ ಕೊಂಚ ಏರಿಕೆಯಾಗಿದೆ.