Sunday, August 23, 2026

BDA Apartments

Home Front Page ನಾಳೆ ಹೈಕೋರ್ಟ್’ನಲ್ಲಿ ‘ವರ್ಗಾವಣೆ’ ವಿಚಾರಣೆ: ಪರವಾಗಿ ತೀರ್ಪು ಬಂದರೆ ಮತ್ತೆ ಶರತ್ ಮೈಸೂರು ಡಿಸಿ?

ನಾಳೆ ಹೈಕೋರ್ಟ್’ನಲ್ಲಿ ‘ವರ್ಗಾವಣೆ’ ವಿಚಾರಣೆ: ಪರವಾಗಿ ತೀರ್ಪು ಬಂದರೆ ಮತ್ತೆ ಶರತ್ ಮೈಸೂರು ಡಿಸಿ?

ಮೈಸೂರು, ಜೂನ್ 06, 2021 (www.justkannada.in): ವರ್ಗಾವಣೆಗೆ ಆಕ್ಷೇಪ ವ್ಯಕ್ತಪಡಿಸಿ ಐಎಎಸ್ ಅಧಿಕಾರಿ ಶರತ್  ಸಲ್ಲಿಸಿದ್ದ ಅರ್ಜಿ ವಿಚಾರಣೆ ನಾಳೆ ನಡೆಯಲಿದೆ.

ಮೈಸೂರು ಡಿಸಿಯಾಗಿ ರೋಹಿಣಿ ಸಿಂಧೂರಿ ನೇಮಕ ಮತ್ತು ತಮ್ಮ ವರ್ಗಾವಣೆ ಪ್ರಶ್ನಿಸಿ ಹೈಕೋರ್ಟ್ ಅರ್ಜಿಸಲ್ಲಿಸಿರುವ ಶರತ್ ಅವರ ವಿಚಾರಣೆಯನ್ನು ನಾಳೆ ಹೈಕೋರ್ಟ್‌ನಲ್ಲಿ ನಡೆಸಲಿದೆ.

ಸದ್ಯ ಮೈಸೂರು ಡಿಸಿಯಾಗಿದ್ದ ರೋಹಿಣಿ ಸಿಂಧೂರಿ ಎತ್ತಂಗಡಿಯಾಗಿದ್ದಾರೆ. ಮೈಸೂರು ನೂತನ ಡಿಸಿಯಾಗಿ ಡಾ. ಗೌತಮ್ ಬಗಾದಿ ನೇಮಕವಾಗಿದ್ದಾರೆ.

ಹೈ ಕೋರ್ಟ್ ಶರತ್ ಪರವಾಗಿ ತೀರ್ಪು ನೀಡಿದರೆ ನೂತನ ಡಿಸಿಯೂ ವರ್ಗಾವಣೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮೈಸೂರಿಗೆ ಮತ್ತೆ ಬರಲಿದ್ದಾರಾ ಶರತ್ ಎಂಬ ಪ್ರಶ್ನೆ ಮೂಡಿದೆ.