ಸೋಷಿಯಲ್ ಮೀಡಿಯಾದಲ್ಲಿ ರಾಜಕಾರಣಿಗಳ ಕಾಲೆಳೆದ ನೆಟ್ಟಿಗರು.!

ಮೈಸೂರು, ಜೂ.01, 2021 : (www.justkannada.in news) : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಜನಪ್ರತಿನಿಧಿಗಳ ನಡುವಿನ ಶೀತಲ ಸಮರ ಇದೀಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ರಾಜಕಾರಣಿಗಳ ವರ್ತನೆಗೆ ಟ್ರೋಲ್ ಗಳ ಸುರಿಮಳೆ ಸುರಿಸಿದ್ದಾರೆ.jk
ಕೋವಿಡ್ ಸಂಕಷ್ಠದ ಸಮಯದಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಒಟ್ಟಾಗಿ ಕೆಲಸ ನಿರ್ವಹಿಸಬೇಕು. ಆದರೆ ಅನಗತ್ಯವಾಗಿ ಬೀದಿ ರಂಪಾಟ ಮಾಡುತ್ತಿರುವುದಕ್ಕೆ ನೆಟ್ಟಿಗರು ಅಸಮಧಾನ ವ್ಯಕ್ತಪಡಿಸಿದ್ದಾರೆ. ವಿಶೇಷ ಅಂದ್ರೆ ಮೈಸೂರಿನ ರಾಜಕಾರಣಿಗಳ ವರ್ತನೆಗೆ ಪಕ್ಷಾತೀತವಾಗಿ ನೆಟ್ಟಿಗರು ತೀವ್ರ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಕರೋನಾ ವಿರುದ್ಧ ಹೋರಾಡಿ ಅಂದ್ರೆ ಜಿಲ್ಲಾಧಿಕಾರಿ ವಿರುದ್ಧ ಹೋರಾಡುತ್ತಿದ್ದೀರಾ ಎಂದು ಸೋಷಿಯಲ್ ಮಿಡಿಯಾದಲ್ಲಿ ಜನಪ್ರತಿನಿಧಿಗಳ ಕಾಲೆಳೆದಿದ್ದಾರೆ.
ಐ ಸಪೋರ್ಟ್ ಮೈಸೂರು ಡಿಸಿ, ಮೈಸೂರು ವಿಥ್ ರೋಹಿಣಿ ಐಎಎಸ್ ….ಈ ರೀತಿಯ ಹ್ಯಾಷ್ ಟ್ಯಾಗ್ ಗಳ ಮೂಲಕ ಮೈಸೂರು ಜಿಲ್ಲಾಧಿಕಾರಿ ಬೆಂಬಲಕ್ಕೆ ನೆಟ್ಟಿಗರು ಮುಂದಾಗಿದ್ದಾರೆ. ಇದೇ ವೇಳೆ ಜಿಲ್ಲಾಧಿಕಾರಿ ವಿರುದ್ಧ ಆರೋಪ ಮಾಡಿದ ಜನಪ್ರತಿನಿಧಿಗಳಿಗೆ ಕಮೆಂಟ್ಸ್ ಗಳ ಮೂಲಕವೇ ಟಾಂಗ್ ನೀಡಿದ್ದಾರೆ.
ಇದರ ಕೆಲ ಸ್ಯಾಂಪಲ್ ಹೀಗಿವೆ…


key words : mysore-bjp-netezens-troller-corono-cold-war