Saturday, August 22, 2026

BDA Apartments

Home Front Page ಮೈಸೂರು ಡಿಡಿಪಿಐ ಆಗಿದ್ದ ಮಂಜುಳಾ ಸೇವಾ ನಿವೃತ್ತಿ.

ಮೈಸೂರು ಡಿಡಿಪಿಐ ಆಗಿದ್ದ ಮಂಜುಳಾ ಸೇವಾ ನಿವೃತ್ತಿ.

ಮೈಸೂರು,ಮೇ,31,2021(www.justkannada.in):  ಮೈಸೂರು, ಚಾಮರಾಜನಗರ, ಕೊಡಗು ಡಿಡಿಪಿಐ ಆಗಿದ್ದ ಮಂಜುಳಾ ಅವರು ಸೋಮವಾರ ಸೇವೆಯಿಂದ ನಿವೃತ್ತರಾದರು.jk

ಕೆ. ಆರ್ ನಗರ ಮಿರ್ಲೆಯವರಾದ ಮಂಜುಳಾ ಅವರು ಮೂರುವರೆ ದಶಕಕಾಲ ಶಿಕ್ಷಣ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಸದ್ಯ ಮೈಸೂರು ಡಯಟ್ ನಲ್ಲಿ ರೀಡರ್ ಆಗಿದ್ದರು.

ವಿಭಿನ್ನ ಕಾರ್ಯಚಟುವಟಿಕೆ, ಹೊಸತನ, ಉತ್ತಮ ಆಡಳಿತದಿಂದ ಮಂಜುಳಾ ಅವರು ಶಿಕ್ಷಣ ಇಲಾಖೆಯಲ್ಲಿ ಒಳ್ಳೆಯ ಹೆಸರು ಪಡೆದಿದ್ದಾರೆ. ಶಿಕ್ಷಕಿಯಾಗಿ, ಅಧಿಕಾರಿ, ಅಧ್ಯಾಪಕಿಯಾಗಿ ಶಿಕ್ಷಣ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ಸಂತಸ  ತಂದಿದೆ. ಮುಂದೆಯೂ ಇಲಾಖೆಯೊಂದಿಗೆ ನಂಟು ಮುಂದೆವರೆಯಲಿದೆ ಎನ್ನುತ್ತಾರೆ ಮಂಜುಳಾ.

Key words: Mysore- DDPI- Manjula – retired -today