Friday, August 14, 2026

BDA Apartments

Home Front Page ನಾಯಕತ್ವ ಬದಲಾವಣೆಯ ಬಗ್ಗೆ ಎಲ್ಲಿಯೂ ಚರ್ಚೆ ಆಗಿಲ್ಲ ಎಂದ್ರು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್..

ನಾಯಕತ್ವ ಬದಲಾವಣೆಯ ಬಗ್ಗೆ ಎಲ್ಲಿಯೂ ಚರ್ಚೆ ಆಗಿಲ್ಲ ಎಂದ್ರು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್..

ಬೆಂಗಳೂರು,ಮೇ,,28,2021(www.justkannada.in):  ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಎಲ್ಲಿಯೂ ಚರ್ಚೆ ಆಗಿಲ್ಲ. ಸಿಎಂ  ಯಡಿಯೂರಪ್ಪ ನಮ್ಮ ಸರ್ವಸಮ್ಮತ ನಾಯಕರು, ಇನ್ನು 2 ವರ್ಷಗಳ ಕಾಲ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸ್ಪಷ್ಟನೆ ನೀಡಿದರು.jk

ನಾಯಕತ್ವ ಬದಲಾವಣೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಳೀನ್ ಕುಮಾರ್ ಕಟೀಲ್, ಸದ್ಯಕ್ಕೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ರಾಜ್ಯದಲ್ಲಿ ಕೋವಿಡ್ ಸೋಂಕು ತಡೆಗಟ್ಟುವುದೇ ಬಿಜೆಪಿ ನಾಯಕರ ಪ್ರಮುಖ ಆದ್ಯತೆ. ಇನ್ನು ಸಚಿವ ಸಿ.ಪಿ ಯೊಗೇಶ್ವರ್  ಜವಾಬ್ದಾರಿಯುತ ಸ್ಥಾನದಲ್ಲಿರುವವರು. ಅವರ ಹೇಳಿಕೆ ಬಗ್ಗೆ ಅವರಿಂದಲೇ ವಿವರ ಪಡೆಯುವೆ ಎಂದರು.

ಕೋವಿಡ್ ಎರಡನೇ ಅಲೆ ಸಾಂಕ್ರಾಮಿಕ ರಾಜ್ಯದ ಮುಂದಿರುವ ಬಹಳ ದೊಡ್ಡ ಸಮಸ್ಯೆಯಾಗಿದ್ದು ಅದು ಮುಗಿಯುವವರೆಗೆ ಬೇರೇನೂ ವಿಚಾರಗಳ ಬಗ್ಗೆ ಮಾತನಾಡುವ ಹಾಗಿಲ್ಲ. ಬಿಜೆಪಿ ಶಾಸಕಾಂಗ ಪಕ್ಷ ಸಭೆ ಕೂಡ ನಡೆಯುವುದಿಲ್ಲ ಎಂದು ಹೇಳಿದ ನಳೀನ್ ಕುಮಾರ್ ಕಟೀಲ್, ಸದ್ಯಕ್ಕೆ  ಕೊರೋನಾ ನಿಯಂತ್ರಣ ವಿಚಾರ ಪ್ರಧಾನ ವಿಷಯವಾಗಬೇಕು. ಅದು ಬಿಟ್ಟು ಬೇರೆ ವಿಚಾರಗಳ ಕಡೆಗೆ ಗಮನ ಕೊಡಬಾರದು ಎಂದು ನಾನು ಮತ್ತೊಮ್ಮೆ ಶಾಸಕರುಗಳಿಗೆ ಸ್ಪಷ್ಟವಾಗಿ ಸೂಚನೆ ನೀಡುತ್ತೇನೆ. ಈ ಹಿಂದೆಯೂ ನಾನು ಶಾಸಕರಿಗೆ ಇದನ್ನೇ ಹೇಳಿದ್ದೆ ಎಂದರು.

Key words: BJP -President -Nalin Kumar Katil – no discussion – leadership- change