JK EXCLUSIVE ; ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡು ಸಂಕಷ್ಠದಲ್ಲಿರುವ ವಿದ್ಯಾರ್ಥಿಗಳಿಗೆ ಮೈಸೂರು ವಿವಿ ‘ ಫ್ರೀ ಸೀಟ್ ‘

 

ಮೈಸೂರು, ಮೇ 28, 2021 : (www.justkannada.in news ) : ಜಾಗತಿಕ ಮಹಾಮಾರಿ ಕರೋನಾ ಸೋಂಕಿನಿಂದ ಸಂಕಷ್ಠಕ್ಕೀಡಾದ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯ ಸಹಾಯ ಹಸ್ತ ಚಾಚಿದೆ. ಕರೋನಾದಿಂದ ಪೋಷಕರನ್ನು ಕಳೆದುಕೊಂಡು ವಿದ್ಯಾಭ್ಯಾಸ ಮಾಡಲು ಅಶಕ್ತರಾದವರಿಗೆ ‘ ಉಚಿತ ಸೀಟು’ ನೀಡುವ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

ಈ ಸಂಬಂಧ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ನೇತೃತ್ವದಲ್ಲಿ ಇಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಮೇಲ್ಕಂಡ ವಿಷಯ ಮಂಡಿಸಿ ಅನುಮೋದನೆ ಪಡೆಯಲಾಯಿತು. ಇಂದು ನಡೆದ ಸಿಂಡಿಕೇಟ್ ಸಭೆಯ ಮುಂದೆ ಪರಿಶೀಲನೆಗೆ ಮತ್ತು ಅನುಮೋದನೆಗೆ ಮಂಡಿಸಿದ ವಿವರ ಹೀಗಿದೆ..

jk

ಕೋವಿಡ್-19 ವೈರಾಣು ಜಗತ್ತಿನಾದ್ಯಂತ 2019ನೇ ವರ್ಷದ ಅಂತ್ಯದಲ್ಲಿ ಆರಂಭಗೊಂಡು ಅದರ ಮೊದಲನೆಯ ಅಲೆಯು 2020ರಲಿ, ಜಾಗತಿಕವಾಗಿ ವಿಸ್ತರಣೆಗೊಂಡು ಪಾಶ್ವಿಮಾತ್ಯ ರಾಷ್ಟ್ರಗಳೂ ಸೇರಿದಂತೆ ನಮ್ಮ ದೇಶದಲ್ಲಿ ಅನೇಕ ಜನರ ಸಾವು-ನೋವು ಮತ್ತು ಹಾನಿಯನ್ನು ಉಂಟುಮಾಡಿದೆ.

ವೈರಾಣುವಿನ ಮೊದಲನೇ ಅಲೆಯ ಹರಡುವಿಕೆಯು 2020ರ ಅಕ್ಟೋಬರ್ /ನವೆಂಬರ್ ನಲ್ಲಿ ಕ್ಷೀಣಿಸಿದರೂ ಅದರ ಎರಡನೇ ಅಲೆಯು 2021ರ ಮಾರ್ಚ್ ತಿಂಗಳಿನಲ್ಲಿ ದೇಶದಾದ್ಯಂತ ತೀವ್ರಗತಿಯಲ್ಲಿ ವಿಸ್ತರಿಸಿದೆ. ಭಾರತ ಸರ್ಕಾರವು ಮತ್ತು ಕರ್ನಾಟಕ ರಾಜ್ಯ ಸರ್ಕಾರವು ಈ ಅಲೆಯ ತೀವ್ರಗತಿಯನ್ನು ತಪ್ಪಿಸಲು ಅನೇಕ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಂಡಿದೆ. ಆದಾಗ್ಯೂ 2ನೇ ಆಲೆಯಿಂದ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಸಾವು- ನೋವು ಉಂಟಾಗಿ ಅನೇಕರು ತಂದೆ ತಾಯಿ ಹಾಗೂ ಮಕ್ಕಳನ್ನು ಕಳೆದುಕೊಂಡಿರುತ್ತಾರೆ.

pratibha-purskar-program-mysore-social-and-educational-development-forum-mysore-university-vc-hemanth-kumar

ಕೆಲವು ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡು ವಿದ್ಯಾರ್ಜನೆ ಮುಂದುವರಿಸಲು ಕಷ್ಟಸಾಧ್ಯವಾಗಿದೆ. ಈ ಜಾಗತಿಕ ಸಂಕಷ್ಟದ ಸಮಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯ, ಈ ರೀತಿ ತಂದೆ ತಾಯಂದಿರನ್ನು ಅಥವಾ ಕುಟುಂಬದ ಜವಾಬ್ದಾರಿಯನ್ನು ವಹಿಸಿಕೊಂಡ ಮುಖ್ಯಸ್ಥರನ್ನು ಕಳೆದುಕೊಂಡು ವಿದ್ಯಾರ್ಜನೆ ಮುಂದುವರೆಸಲು ಸಾಧ್ಯವಾಗದಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಮುಂದುವರಿಸಲು ಅವರ ಬದುಕಿನ ಭವಿಷ್ಯವನ್ನು ರೂಪಿಸಲು ಪ್ರಸ್ತಾವನೆಯನ್ನು ತಯಾರಿಸಿದೆ.

ಕೋವಿಡ್-19 ವೈರಾಣುವಿನಿಂದ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳಲ್ಲಿ ನಿಧನ ಹೊಂದಿದ ಪೋಷಕರ ಮಕ್ಕಳಿಗೆ ಮೈಸೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳಲ್ಲಿ ಅಂದರೆ ಮಹಾರಾಜ ಕಾಲೇಜು, ಯುವರಾಜ ಕಾಲೇಜು, ವಿಶ್ವವಿದ್ಯಾನಿಲಯ ಸಂಜೆ ಕಾಲೇಜು ಮತ್ತು ವಿಶ್ವವಿದ್ಯಾನಿಲಯ ಲಲಿತ ಕಲೆಗಳ ಕಾಲೇಜುಗಳಲ್ಲಿ ತಲಾ ಐದು ಸೀಟುಗಳನ್ನು ಹಾಗೂ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರಗಳಾದ ಮೈಸೂರಿನ ಮಾನಸಗಂಗೋತ್ರಿ, ಮಂಡ್ಯದ ಸರ್.ಎಂ. ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ, ಹಾಸನದ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರ, ಮತ್ತು ಚಾಮರಾಜನಗರದ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರಗಳಲ್ಲಿ ತಲಾ ಮೂರು ಸೀಟುಗಳ ಪ್ರದೇಶಾತಿಯನ್ನು ಅರ್ಹ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲು ನಿರ್ಧರಿಸಿದೆ.

key words : mysore-university-syndicate-free-seat-corona-students-vc-hemanth.kumar