Tuesday, September 15, 2026

BDA Apartments

ಮೈಸೂರು ಜಿಪಂನಲ್ಲಿ ಸಂಭವಿಸಿದ ಸ್ಪೋಟಕ್ಕೆ ‌ಜನರೇಟರ್ ಕಾರಣವಲ್ಲ : ಸ್ಪಷ್ಟನೆ ...
Home Front Page ಮೈಸೂರು ಜಿಪಂನಲ್ಲಿ ಸಂಭವಿಸಿದ ಸ್ಪೋಟಕ್ಕೆ ‌ಜನರೇಟರ್ ಕಾರಣವಲ್ಲ : ಸ್ಪಷ್ಟನೆ

ಮೈಸೂರು ಜಿಪಂನಲ್ಲಿ ಸಂಭವಿಸಿದ ಸ್ಪೋಟಕ್ಕೆ ‌ಜನರೇಟರ್ ಕಾರಣವಲ್ಲ : ಸ್ಪಷ್ಟನೆ

 

ಮೈಸೂರು, ಮೇ 23, 2021 (www.justkannada.in): ಮೈಸೂರಿನ‌  ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಇಂದು ಸಂಭವಿಸಿದ ಸ್ಪೋಟಕ್ಕೆ ‌ಜನರೇಟರ್ ಕಾರಣವಲ್ಲ ಎಂದು ಸ್ಪಷ್ಟ ಪಡಿಸಲಾಗಿದೆ.
ಇದು ಎಲ್.ಟಿ ಪ್ಯಾನಲ್ ನಲ್ಲಿನ ತಾಂತ್ರಿಕ ದೋಷದಿಂದ ಸಂಭವಿಸಿದ ಘಟನೆಯೇ ಹೊರತು, ಜನರೇಟರ್ ಗೂ ಸ್ಪೋಟಕ್ಕೂ ಯಾವುದೇ ಸಂಬಂಧವಿಲ್ಲ. ಜನರೇಟರ್ ಸುಸ್ಥಿತಿಯಲ್ಲೇ ಇದೆ ಎಂದು ಕಂಪನಿ ಮೂಲಗಳು ಜಸ್ಟ್ ಕನ್ನಡಕ್ಕೆ ಸ್ಪಷ್ಟನೆ ನೀಡಿವೆ.
ಇಂದು ಮುಂಜಾನೆ ನಡೆದ ಘಟನೆಯಿಂದ ಪಟಾಕಿ ಸಿಡಿದಂತೆ ಬೆಂಕಿ ಸಿಡಿದು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು . ತಕ್ಷಣ ಸುದ್ದಿ ತಿಳಿದ ಅಗ್ನಿ‌ಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದರು.

mysore-zp-fire-accident-clarification

key words : mysore-zp-fire-accident-clarification