ಕೊರೊನಾದಿಂದ ಗುಣಮುಖರಾದ ಪ್ರಕಾಶ್ ಪಡುಕೊಣೆ ಆಸ್ಪತ್ರೆಯಿಂದ ಡಿಸ್ಚಾರ್ಚ್

ಬೆಂಗಳೂರು, ಮೇ 15, 2021 (www.justkannada.in): ದೀಪಿಕಾ ಪಡುಕೋಣೆ ಅವರ ತಂದೆ ಹಾಗೂ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಕೊರೊನಾದಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ.

ಜ್ವರದಿಂದ ಬಳಲುತ್ತಿದ್ದ ಪ್ರಕಾಶ್ ಪಡುಕೋಣೆ ಅವರನ್ನು 2021 ರ ಮೇ 1 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ವಾರದ ಚಿಕಿತ್ಸೆ ಬಳಿಕ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಪ್ರಕಾಶ್ ಪಡುಕೋಣೆ ಮಾತ್ರವಲ್ಲದೇ ಪತ್ನಿ ಉಜ್ವಲಾ ಪಡುಕೋಣೆ, ಎರಡನೇ ಮಗಳು ಅನಿಶಾ ಪಡುಕೋಣೆ ಅವರಿಗೂ ಕೋವಿಡ್ ಸೋಂಕು ತಗುಲಿತ್ತು.