Sunday, August 23, 2026

BDA Apartments

Home Front Page ಬಡವರಿಗೆ ವಿಶೇಷ ಪ್ಯಾಕೇಜ್ ಮತ್ತು ಎರಡು ವಾರ ಸಂಪೂರ್ಣ ಲಾಕ್ ಡೌನ್ ಗೆ ಸಿದ್ಧರಾಮಯ್ಯ ಆಗ್ರಹ…

ಬಡವರಿಗೆ ವಿಶೇಷ ಪ್ಯಾಕೇಜ್ ಮತ್ತು ಎರಡು ವಾರ ಸಂಪೂರ್ಣ ಲಾಕ್ ಡೌನ್ ಗೆ ಸಿದ್ಧರಾಮಯ್ಯ ಆಗ್ರಹ…

ಬೆಂಗಳೂರು,ಏ,10,2021(www.justkannada.in):  ಈಗ ಜಾರಿ ಮಾಡಿರುವುದು ಸಂಪೂರ್ಣ ಲಾಕ್ ಡೌನ್ ಅಲ್ಲ. ನನ್ನ ಪ್ರಕಾರ ಎರಡು ವಾರ ಸಂಪೂರ್ಣ ಲಾಕ್ ಡೌನ್ ಮಾಡಬೇಕು. ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಸರ್ಕಾರಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಆಗ್ರಹಿಸಿದರು.jk

ಕಾವಲ್ ಬೈರಸಂದ್ರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಹೆಚ್ಚು ರೋಗಿಗಳು ಪತ್ತೆ ಆಗಬಾರದು ಎಂಬ ಕಾರಣಕ್ಕೆ ಸರ್ಕಾರ ಪರೀಕ್ಷೆ  ಪ್ರಮಾಣ ಕಡಿಮೆ ಮಾಡಿದೆ. ಪರೀಕ್ಷೆ  ಹೆಚ್ಚಾದರೆ ಸೋಂಕಿತರ ಸಂಖ್ಯೆ ಜಾಸ್ತಿ ಆಗುತ್ತದೆ. ಎರಡು ವಾರ ಸಂಪೂರ್ಣವಾಗಿ  ಲಾಕ್ಡೌನ್ ಮಾಡಬೇಕು. ಇದು ನನ್ನ ಅಭಿಪ್ರಾಯ ಎಂದರು.

ಲಸಿಕೆ ಮಾತ್ರ ಶಾಶ್ವತ ಪರಿಹಾರ…

ಪ್ರತಿನಿತ್ಯ 50 ಸಾವಿರ ಜನರಿಗೆ ಪಾಸಿಟಿವ್ ಬರ್ತಿದೆ.‌ ಇದು ಒಬ್ಬರಿಂದ ಒಬ್ಬರಿಗೆ ಹರಡುವ ರೋಗ. ಜನತೆ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ. ನಿಮ್ಮ ರಕ್ಷಣೆ ಜತೆಗೆ ಬೇರೆಯವರ ರಕ್ಷಣೆ ಸಹ ಮಾಡಿ. ಲಸಿಕೆ ತಪ್ಪದೇ ಹಾಕಿಸಿಕೊಳ್ಳಿ. ಕೋ ವ್ಯಾಕ್ಸಿನ್ ಅಥವಾ ಕೋವಿಶಿಲ್ಡ್ ಹಾಕಿಸಿಕೊಳ್ಳಿ.‌ ಲಸಿಕೆ ಮಾತ್ರ ಶಾಶ್ವತ ಪರಿಹಾರ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

ನಮ್ಮ ರಾಜ್ಯದಲ್ಲಿ ಉತ್ಪಾದನೆ ಆಗುವ ಆಕ್ಸಿಜನ್  ಪೂರ್ಣವಾಗಿ ಬಳಸಿಕೊಳ್ಳಿ ಎಂದು ಕೇಂದ್ರ ಹೇಳಬೇಕಿತ್ತು

ಸರ್ಕಾರ  ಎಲ್ಲರಿಗೂ ವ್ಯಾಕ್ಸಿನ್ ಕೊಡಬೇಕು. ಈಗ ವ್ಯಾಕ್ಸಿನ್ ಕೊರತೆ ಆಗಿದೆ. ಜನ  ಆಕ್ಸಿಜನ್ ಕೊರತೆಯಿಂದ ಸಾಯುತ್ತಿದ್ದಾರೆ. ಆಕ್ಸಿಜನ್ ಸಕಾಲದಲ್ಲಿ ಸಿಕ್ಕರೆ ಬದುಕಿಸಬಹುದು. ಆಕ್ಸಿಜನ್ ಇಲ್ಲದೇ ದಾರಿಯಲ್ಲಿ ಬರುವಾಗ,ಆಸ್ಪತ್ರೆ ಕಾರಿಡರ್, ರಸ್ತೆ, ಅಂಬುಲೆನ್ಸ್, ಆಟೋದಲ್ಲಿ ಸತ್ತು ಹೋದ್ರು ಅನ್ನೋ ಸುದ್ದಿ ಬರುತ್ತಿವೆ. ಸೋಂಕು ನಿಯಂತ್ರಣ ಹಾಗೂ ಸೋಂಕಿತರ ರಕ್ಷಣೆಗೆ ಸರ್ಕಾರ ಯಾವುದೇ ತಯಾರಿ ಮಾಡಿಕೊಂಡಿಲ್ಲ. ಆಕ್ಸಿಜನ್ ಸಮಸ್ಯೆ ಕೂಡಲೇ ಬಗೆಹರಿಸಬೇಕು. ಹೈಕೋರ್ಟ್, ಸುಪ್ರೀಂ ಕೋರ್ಟ್ ಹೇಳಿದ್ರು ಇನ್ನೂ ಹೆಚ್ಚುವರಿ ಆಕ್ಸಿಜನ್ ಕೊಡ್ತಿಲ್ಲ. ನಮ್ಮ ರಾಜ್ಯದಲ್ಲಿ ಉತ್ಪಾದನೆ ಆಗಿದ್ದನ್ನ  ಪೂರ್ಣವಾಗಿ ಬಳಸಿಕೊಳ್ಳಿ ಎಂದು ಕೇಂದ್ರ ಹೇಳಬೇಕಿತ್ತು. ಆದರೆ ಕೇಂದ್ರಕ್ಕೆ ಬದ್ಧತೆ ಇಲ್ಲ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.

ಅಕ್ಕಿ ಪ್ರಮಾಣ ಕಡಿಮೆ ಮಾಡಿರುವ ಸರ್ಕಾರ ಮಣ್ಣು ಕಲ್ಲು ಇರೋ ರಾಗಿ ಕೊಡ್ತಿದೆ

ಅಕ್ಕಿ ಪ್ರಮಾಣ ಕಡಿಮೆ ಮಾಡಿರುವ ಸರ್ಕಾರ ಮಣ್ಣು ಕಲ್ಲು ಇರೋ ರಾಗಿ ಕೊಡ್ತಿದೆ ಎಂದು ಆರೋಪಿಸಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಬಡವರ ಜೀವ ಉಳಿಸುವ ಕೆಲಸ ಸರ್ಕಾರ ಮಾಡಬೇಕು. ಉತ್ಪಾದಕರನ್ನ ಉಳಿಸಿಕೊಳ್ಳಲು ಸರ್ಕಾರ ಅವರ ಕೈಗೆ ಹಣ ಕೊಡಬೇಕು..‌ಆರ್ಥಿಕ ಸಹಾಯ ಮಾಡಬೇಕು. ಆಂಧ್ರ ಪ್ರದೇಶ, ಕೇರಳದಲ್ಲಿ ಪ್ಯಾಕೇಜ್ ಕೊಟ್ಟಿದ್ದಾರೆ. ಇಲ್ಲೂ ಸಹ ಕೊಡಬೇಕು ಎಂದು ಒತ್ತಾಯ ಮಾಡ್ತೀನಿ. ಆದರೆ, ಈ ಸರ್ಕಾರದಲ್ಲಿ ಬದ್ಧತೆ ಕಾಣುತ್ತಿಲ್ಲ. ದುಡಿಯುವ ವರ್ಗಕ್ಕೆ ಏನು ಮಾಡ್ತಿಲ್ಲ ಎಂದು ಹರಿಹಾಯ್ದರು.two-weeks-full-lockdown-special-package-poor-former-cm-siddaramaiah

ನಾನು ನಮ್ಮ ಶಾಸಕರಿಗೆ ಹೇಳಿದ್ದೇನೆ. ಕೆಲವರು ಆಸ್ಪತ್ರೆ ಸಮಸ್ಯೆ ಬಗೆಹರಿಸುತ್ತಿದ್ದಾರೆ. ಕೆಲವರು ಆಹಾರ ಧಾನ್ಯ, ಆಸ್ಪತ್ರೆ ವ್ಯವಸ್ಥೆ ಮಾಡುತ್ತಿದ್ದಾರೆ. ಸರ್ಕಾರಕ್ಕೆ ನಮ್ಮ ಸಹಕಾರ ಇರುತ್ತೆ..ಆದರೆ  ಆಸ್ಪತ್ರೆ, ಆ್ಯಂಬುಲೆನ್ಸ್, ಆಕ್ಸಿಜನ್ ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂದರು.

ಲಾಕ್ ಡೌನ್ ಅವಧಿಯಲ್ಲಿ ದುಡಿಯುವ ವರ್ಗ, ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಬಡವರು ಎಲ್ಲಿ ಹೋಗಬೇಕು.. ಕೂಲಿ ಕಾರ್ಮಿಕರು,ಆಟೋ ರಿಕ್ಷಾ ಓಡಿಸುವವರ ಕಥೆ ಏನು. ಕೂಡಲೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ.‌ಎಂದು  ಸಿದ್ಧರಾಮಯ್ಯ ಒತ್ತಾಯಿಸಿದರು.

ಕೊರೋನಾ ವಿಷಯದಲ್ಲಿ ಸರ್ಕಾರ ಸಂಪೂರ್ಣ:  ಇದು ‌ ಸತ್ತ ಸರ್ಕಾರ

ಕೇಂದ್ರದಿಂದ ಬರುತ್ತಿರುವ ವೆಂಟಿಲೇಟರ್ ಬಳಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಕೊರೊನಾ ವಿಷಯದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದು ‌ ಸತ್ತ ಸರ್ಕಾರ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಆಗಿದೆ. ಕೇಂದ್ರ ಸರ್ಕಾರ ವಿಫಲವಾದ ಬಳಿಕ ಕೋರ್ಟ್  ಮಧ್ಯೆ ಪ್ರವೇಶ ಆಗಿದೆ. ಇದರ ಅರ್ಥ ಸರ್ಕಾರ ಸತ್ತು ಹೋಗಿದೆ ಎಂದು ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

Key words: Two weeks- full- lockdown-special package – poor-Former CM -Siddaramaiah.