Friday, August 21, 2026

BDA Apartments

Home Front Page ರಾಜ್ಯದಿಂದ ಗುಜರಾತ್, ಉತ್ತರ ಪ್ರದೇಶಕ್ಕೆ ಆಕ್ಸಿಜನ್ –ಮಾಜಿ ಸಿಎಂ ಹೆಚ್.ಡಿಕೆ ಆರೋಪ…

ರಾಜ್ಯದಿಂದ ಗುಜರಾತ್, ಉತ್ತರ ಪ್ರದೇಶಕ್ಕೆ ಆಕ್ಸಿಜನ್ –ಮಾಜಿ ಸಿಎಂ ಹೆಚ್.ಡಿಕೆ ಆರೋಪ…

ಬೆಂಗಳೂರು,ಮೇ,4,2021(www.justkannada.in):  ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಈ ನಡುವೆ ರಾಜ್ಯದಿಂದ ಗುಜರಾತ್ , ಉತ್ತರ ಪ್ರದೇಶಕ್ಕೆ ಆಕ್ಸಿಜನ್ ಸಪ್ಲೆ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.jk

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇದ್ದರೂ ಗುಜರಾತ್, ಉತ್ತರ ಪ್ರದೇಶಕ್ಕೆ ಆಕ್ಸಿಜನ್ ಸರಬರಾಜು ಮಾಡುತ್ತಿದ್ದಾರೆ.  ಆಕ್ಸಿಜನ್ ಕಳಿಸಿಲ್ಲ ಎಂದು ಹೇಳುವ ಧೈರ್ಯ ಬಿಜೆಪಿಗೆ ಇಲ್ಲ. ರಾಜ್ಯದ ಪರಿಸ್ಥಿತಿ ಇನ್ನೂ ಕೈ ಮೀರಿ ಹೋಗಿಲ್ಲ. ಆದರೆ ಸರ್ಕಾರಕ್ಕೆ  ಹೇಗೆ ನಿರ್ವಹಣೆ ಮಾಡಬೇಕು ಎಂಬುದು ಗೊತ್ತಿಲ್ಲ. ನಿರ್ವಹಣೆ ಮಾಡುವುದರಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.Oxygen – state- to- Gujarat-Uttar Pradesh- Former CM- HD kumaraswamy

ಮಾರ್ಚ್ 15 ರಂದೇ ಲಾಕ್ ಡೌನ್ ಮಾಡುವಂತೆ ಹೇಳಿದ್ದೆ. ರಾಜ್ಯಪಾಲರ ಸಭೆಯಲ್ಲೂ ತಿಳಿಸಿದ್ದೆ. ನೈಟ್ ಕರ್ಫ್ಯೂ, ಕರ್ಫ್ಯೂ ನಿಂದ ಏನು ಪ್ರಯೋಜನವಿಲ್ಲ.  ಹೀಗಾಗಿ ಸಂಪೂರ್ಣ ಲಾಕ್ ಡೌನ್ ಮಾಡುವಂತೆ ಸರ್ಕಾರಕ್ಕೆ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದರು.

Key words: Oxygen – state- to- Gujarat-Uttar Pradesh- Former CM- HD kumaraswamy