Sunday, September 20, 2026

BDA Apartments

Home Front Page ಕರೋನಾ ಚಿಕಿತ್ಸೆಗೆ ನಿಂಬೆ ಹಣ್ಣಿನ ರಸ: ಉದ್ಯಮಿ ಡಾ. ವಿಜಯಸಂಕೇಶ್ವರ್ ಹೇಳಿಕೆ ಕುರಿತು ಸಂಸದ ಪ್ರತಾಪ್...

ಕರೋನಾ ಚಿಕಿತ್ಸೆಗೆ ನಿಂಬೆ ಹಣ್ಣಿನ ರಸ: ಉದ್ಯಮಿ ಡಾ. ವಿಜಯಸಂಕೇಶ್ವರ್ ಹೇಳಿಕೆ ಕುರಿತು ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದು ಹೀಗೆ…

ಮೈಸೂರು,ಏಪ್ರಿಲ್, 29,2021(www.justkannada.in): ಕರೋನಾ ಚಿಕಿತ್ಸೆಗೆ ಮೂಗಿಗೆ ಮೂರು ಹನಿ ನಿಂಬೆಹಣ್ಣಿನ ರಸ ಹಾಕಿ ಎಂಬ ಉದ್ಯಮಿ ಡಾ. ವಿಜಯಸಂಕೇಶ್ವರ್ ಹೇಳಿಕೆಯನ್ನ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಬೆಂಬಲಿಸಿದ್ದಾರೆ.jk

ಈ ಕುರಿತು ಇಂದು ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಸಂಕೇಶ್ವರ್ ಅವರು ಹೇಳಿರುವುದರಲ್ಲಿ ತಪ್ಪೇನಿದೆ? ಅವರೇನೂ ನಿಂಬೆಹಣ್ಣು ರಸ ಕರೋನಾಗೆ ಮೆಡಿಸನ್ ಎಂದು ಹೇಳಿದ್ದಾರಾ? ದೇಹದ ಕಫಾ ತೆಗೆಯಲು ನಿಂಬೆಹಣ್ಣಿನ ರಸ ಸಹಕಾರಿ ಎಂದು ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ. ಇದನ್ನೇಕೆ ಕೆಲವರು ವಿವಾದ ಮಾಡುತ್ತಿದ್ದಾರೆ? ವಿಜಯ ಸಂಕೇಶ್ವರ್ ಬಗ್ಗೆ ಮಾತಾಡುವ ಮುನ್ನಾ ಮಾತಾಡುವವರು ತಮ್ಮ ಯೋಗ್ಯತೆ ಏನೆಂದು ನೋಡಿಕೊಳ್ಳಲಿ ಎಂದರು.

lemon-juice-corona-treatment-businessman-vijayasankeshwars-statement-mp-pratap-simha
ಕೃಪೆ-internet

ಪ್ರಧಾನಿ ಮೋದಿಯನ್ನು ಟ್ವಿಟ್ಟರ್ ನಲ್ಲಿ ಅತಿ ಹೆಚ್ಚು ಟೀಕಿಸುವವರಿಗೂ ತಿರುಗೇಟು ನೀಡಿದ ಸಂಸದ ಪ್ರತಾಪ್ ಸಿಂಹ, ಮೋದಿ ಉಜ್ವಲವಾಗಿ ಬೆಳುಗುತ್ತಿರುವ ಸೂರ್ಯ. ಸೂರ್ಯನೆಡೆಗೆ ನಿಂತು ಉಗುಳಿದರೆ ಉಗುಳು ಯಾರಿಗೆ ತಗುಲುತ್ತದೆ ಗೊತ್ತಾ? ಮೋದಿ ಟೀಕಿಸುವವರ ಕಥೆಯೂ ಇಷ್ಟೆ ಎಂದರು.

Key words: Lemon juice – corona- treatment-Businessman -Vijayasankeshwar’s- statement- MP -Pratap Simha