Friday, August 21, 2026

BDA Apartments

Home Cinema ಹೊಸ ‘ಅವತಾರ’ದಲ್ಲಿ ಶ್ರೀನಗರ ಕಿಟ್ಟಿ ರಿ ಎಂಟ್ರಿ !

ಹೊಸ ‘ಅವತಾರ’ದಲ್ಲಿ ಶ್ರೀನಗರ ಕಿಟ್ಟಿ ರಿ ಎಂಟ್ರಿ !

ಬೆಂಗಳೂರು, ಜುಲೈ 08, 2019 (www.justkannada.in):

‘ಅವತಾರ ಪುರುಷ’ನ ಜೊತೆಯಾಗುವುದಕ್ಕೆ ಹೊಸ ಅತಿಥಿಯೊಬ್ಬರ ಎಂಟ್ರಿಯಾಗಿದೆ. ಹಾಗೆಯೇ ಅವರನ್ನು ಒಳಗೊಂಡ ಪೋಸ್ಟರ್ ವೊಂದು ರಿಲೀಸ್ ಆಗಿದೆ. ಹೌದು, ಈ ಚಿತ್ರದಲ್ಲಿ ಮಂತ್ರವಾದಿ ಗೆಟಪ್ ನಲ್ಲಿ ಕಾಣಿಸಿಕೊಳ್ತಿದ್ದಾರೆ.

ಇನ್ನು ಈ ಪೋಸ್ಟರ್ ತುಂಬ ವಿಭಿನ್ನವಾಗಿದೆ. ಚಿತ್ರದ ಕಿಟ್ಟಿ ಲುಕ್ ಗಮನ ಸೆಳೆಯುತ್ತಿದ್ದು, ಅವರು ವಿಭೂತಿ ಹಚ್ಚಿಕೊಂಡು, ಕಪ್ಪು ವಸ್ತ್ರ ಧರಿಸಿ ಕಿಟ್ಟಿ ಕಾಣಿಸಿಕೊಂಡಿದ್ದಾರೆ. ಅವರ ಪಕ್ಕ ಕವಡೆ ಹಾಗೂ ಬೆಂಕಿಯ ಪಂಜು ಇದೆ.
ಇನ್ನು ಮತ್ತೊಂದು ವಿಶೇಷವೆಂದರೆ, ಇವತ್ತು ಶ್ರೀನಗರ ಕಿಟ್ಟಿಗೆ ಜನ್ಮದಿನದ ಸಂಭ್ರಮ. ಹಾಗಾಗಿ ಚಿತ್ರತಂಡ ಹೊಸ ಪೋಸ್ಟರ್ ಕೂಡ ರಿಲೀಸ್ ಮಾಡಿದೆ.