Saturday, September 5, 2026

BDA Apartments

Home Front Page ಮೈತ್ರಿ ಸರ್ಕಾರದ ಉಳುವಿಗಾಗಿ ಕಾಂಗ್ರೆಸ್ ಸಚಿವರ ಸಾಮೂಹಿಕ ರಾಜೀನಾಮೆ….

ಮೈತ್ರಿ ಸರ್ಕಾರದ ಉಳುವಿಗಾಗಿ ಕಾಂಗ್ರೆಸ್ ಸಚಿವರ ಸಾಮೂಹಿಕ ರಾಜೀನಾಮೆ….

ಬೆಂಗಳೂರು,ಜು,8,2019(www.justkannada.in):  ಮೈತ್ರಿ ಸರ್ಕಾರದ ಉಳಿವಿಗಾಗಿ ಕಾಂಗ್ರೆಸ್ ನ ಎಲ್ಲಾ ಸಚಿವರು ರಾಜೀನಾಮೆ ಸಲ್ಲಿಕೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಡಿಸಿಎಂ ಪರಮೇಶ್ವರ್ ನಿವಾಸದಲ್ಲಿ ಇಂದುನಿವಾಸದಲ್ಲಿ ಸಂಪುಟದಲ್ಲಿರುವ ಕಾಂಗ್ರೆಸ್ ಸಚಿವರಿಗೆ ಉಪಹಾರ ಕೂಟವನ್ನು ಆಯೋಜಿಸಲಾಗಿತ್ತು. ಉಪಹಾರ ಕೂಟದಲ್ಲಿ ಸಿಎಲ್ ಪಿ ನಾಯಕ ಸಿದ್ದರಾಮಯ್ಯ, ಸಚಿವರಾದ ಡಿ.ಕೆ ಶಿವಕುಮಾರ್, ಕೆ.ಜೆ ಜಾರ್ಜ್ ಎಂಬಿ ಪಾಟೀಲ್ ಸೇರಿ ಹಲವು ಸಚಿವರು ಹಾಜರಾಗಿದ್ದರು.

ಈ ನಡುವೆ ಉಪಹಾರ ಕೂಟಕ್ಕೆ  ಸಚಿವರಾದ ಇ.ತುಕಾರಾಂ, ಎಂಟಿಬಿ ನಾಗರಾಜ್ ಸೇರಿ ಮೂವರು ಸಚಿವರು ಗೈರಾಗಿದ್ದರು. ಗೈರಾದ ಸಚಿವರು ಬಿಟ್ಟು ಉಳಿದ ಎಲ್ಲಾ ಕಾಂಗ್ರೆಸ್ ಸಚಿವರು ತಮ್ಮ ಸಚಿವ ಸ್ಥಾನಕ್ಕೆ ಸಿಎಲ್ ಪಿ ನಾಯಕ ಸಿದ್ದರಾಮಯ್ಯಗೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: alliance govrnament-congress-ministers- resigned