ಮೈಸೂರಿನ ರಂಗಕರ್ಮಿ ಕೆ.ಮುದ್ದುಕೃಷ್ಣ ದಂಪತಿ ಅಪಘಾತದಲ್ಲಿ ಸಾವು

ಮೈಸೂರು, ಜುಲೈ 08, 2019 (www.justkannada.in): ಲಕ್ನೋ ಬಳಿ ಸಂಭವಿಸಿದ ಅಪಘಾತದಲ್ಲಿ ಮೈಸೂರಿನ ರಂಗಕಮಿ ಕೆ.ಮುದ್ದುಕೃಷ್ಣ ಹಾಗೂ ಅವರ ಪತ್ನಿ ಬಿ.ಇಂದ್ರಾಣಿ ಮೃತಪಟ್ಟಿದ್ದಾರೆ.mysore-theater-artist-muddu-krishna-couple-death-in-accident

ನಿನ್ನೆ ಲಕ್ನೋದಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಮುದ್ದುಕೃಷ್ಣ ಹಾಗೂ ಇಂದ್ರಾಣಿ ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೇ ಇಂದ್ರಾಣಿ ಕೊನೆಯುಸಿರೆಳೆದಿದ್ದರು.

ಚೇತರಿಕೆ ಹಾದಿಯಲ್ಲಿದ್ದ ಮುದ್ದುಕೃಷ್ಣ ಅವರು ಪತ್ನಿ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಂದು ಇಂದ್ರಾಣಿ ಅವರ ಜನ್ಮದಿನ. ಈ ಸಂದರ್ಭದಲ್ಲೇ ದುರಂತ ಸಂಭವಿಸಿದೆ.