Sunday, September 27, 2026

BDA Apartments

ಇಂದಿನಿಂದ ಮತ್ತೆ ಬಾಗಿಲು ಮುಚ್ಚಿದ ಚಿತ್ರಮಂದಿರಗಳು BDA JK_Adv BDA Adv
Home Cinema ಇಂದಿನಿಂದ ಮತ್ತೆ ಬಾಗಿಲು ಮುಚ್ಚಿದ ಚಿತ್ರಮಂದಿರಗಳು

ಇಂದಿನಿಂದ ಮತ್ತೆ ಬಾಗಿಲು ಮುಚ್ಚಿದ ಚಿತ್ರಮಂದಿರಗಳು

ಬೆಂಗಳೂರು, ಏಪ್ರಿಲ್ 21, 2021 (www.justkannada.in): ಇಂದಿನಿಂದ ರಾಜ್ಯದಾದ್ಯಂತ ಚಿತ್ರಮಂದಿರಗಳು ಮತ್ತೆ ಸಂಪೂರ್ಣ ಬಂದ್ ಆಗಲಿವೆ.

ರಾಜ್ಯ ಸರ್ಕಾರ ಇಂದು ಹೊಸ ಮಾರ್ಗಸೂಚಿ ಹೊರಡಿಸಿದ್ದು, ಇದರಂತೆ ಮತ್ತೆ ಚಿತ್ರಮಂದಿರಗಳು ಬಾಗಿಲು ಮುಚ್ಚಲಿವೆ.

ಇದರ ಜತೆಗೆ ರಂಗಮಂದಿರಗಳು, ಆಡಿಟೋರಿಯಮ್‌ ಗಳು, ಮಾಲ್‌ ಗಳು, ಮನೊರಂಜನಾತ್ಮಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು ಸಹ ಬಂದ್ ಆಗಲಿವೆ.

ಅಂದಹಾಗೆ ಏಪ್ರಿಲ್ 3 ರಂದು ಹೊರಡಿಸಲಾಗಿದ್ದ ಆದೇಶದಲ್ಲಿ ಚಿತ್ರಮಂದಿರಗಳಲ್ಲಿ 50% ಪ್ರೇಕ್ಷಕರಿಗಷ್ಟೆ ಸಿನಿಮಾ ವೀಕ್ಷಿಸಲು ಅವಕಾಶ ನೀಡಲಾಗಿತ್ತು. ಹೊಸ ಮಾರ್ಗಸೂಚಿ ಮೇ 4 ರವರೆಗೆ ಜಾರಿಯಲ್ಲಿರಲಿದೆ.