Sunday, September 27, 2026

BDA Apartments

ಡೆಲ್ಲಿ ವಿರುದ್ಧ ಸೋತ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್ ಶರ್ಮಾಗೆ ದಂಡ BDA...
Home Front Page ಡೆಲ್ಲಿ ವಿರುದ್ಧ ಸೋತ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್ ಶರ್ಮಾಗೆ ದಂಡ

ಡೆಲ್ಲಿ ವಿರುದ್ಧ ಸೋತ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್ ಶರ್ಮಾಗೆ ದಂಡ

ಬೆಂಗಳೂರು, ಏಪ್ರಿಲ್ 21, 2021 (www.justkannada.in): ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ಮುಂಬೈ ಇಂಡಿಯನ್ಸ್ ಟೀಂ ಕ್ಯಾಪ್ಟನ್ ರೋಹಿತ್ ಶರ್ಮಾಗೆ ದಂಡ ವಿಧಿಸಲಾಗಿದೆ.

ಸೋಲಿನ ಬೆನ್ನಲ್ಲೇ ಮುಂಬೈ ನಾಯಕನಿಗೆ ಬರೋಬ್ಬರಿ 12 ಲಕ್ಷ ರೂ.ದಂಡ ವಿಧಿಸಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸ್ಲೋ ಓವರ್‌ರೇಟ್‌ ನಿರ್ವಹಿಸಿದ್ದಕ್ಕಾಗಿ ರೋಹಿತ್’ಗೆ ವಿಧಿಸಲಾಗಿದೆ.

ಐಸಿಸಿ ನಿಯಮದ ಪ್ರಕಾರ  ಟಿ20ಐನಲ್ಲಾದರೆ ಗಂಟೆಗೆ 14.11 ಓವರ್‌ ಮುಗಿಸಿರಬೇಕಾಗುತ್ತದೆ.

ಐಪಿಎಲ್‌ನಲ್ಲಿ 90 ನಿಮಿಷಗಳ ಒಳಗಾಗಿ ಇನ್ನಿಂಗ್ಸ್‌ ಮುಗಿಸಬೇಕಾಗುತ್ತದೆ. ಈ ಕಾಲಾವಧಿ ಮೀರಿದರೆ ಫೀಲ್ಡಿಂಗ್ ತಂಡಕ್ಕೆ ದಂಡ ವಿಧಿಸಲಾಗುತ್ತದೆ.