Wednesday, August 12, 2026

BDA Apartments

Home Front Page ಬರೋಬ್ಬರಿ 905 ಕೋಟಿ ರೂ.ಗೆ ಪ್ರೊ ಕಬಡ್ಡಿ ಪ್ರಸಾರ ಹಕ್ಕು ಪಡೆದ ಸ್ಟಾರ್ ಸ್ಪೋರ್ಟ್ಸ್

ಬರೋಬ್ಬರಿ 905 ಕೋಟಿ ರೂ.ಗೆ ಪ್ರೊ ಕಬಡ್ಡಿ ಪ್ರಸಾರ ಹಕ್ಕು ಪಡೆದ ಸ್ಟಾರ್ ಸ್ಪೋರ್ಟ್ಸ್

ಬೆಂಗಳೂರು, ಏಪ್ರಿಲ್ 21, 2021 (www.justkannada.in): ಸ್ಟಾರ್ ಸ್ಪೋರ್ಟ್ಸ್‌ ಬರೋಬ್ಬರಿ 905 ಕೋಟಿ ರೂಪಾಯಿಗೆ ಈ ಬಾರಿಯ ಪ್ರೊ ಕಬಡ್ಡಿ ಪ್ರಸಾರ ಹಕ್ಕು ಪಡೆದಿದೆ.

5 ವರ್ಷಗಳಿಗೆ (2021ರಿಂದ 2025) 905 ಕೋಟಿ ರುಪಾಯಿಗೆ ಬಿಡ್‌ ಮಾಡಿ ಪ್ರಸಾರ ಹಕ್ಕನ್ನು ಸ್ಟಾರ್‌ ಸಂಸ್ಥೆ ಪಡೆದುಕೊಂಡಿದೆ.

ಇದೇ ಮೊದಲ ಬಾರಿಗೆ ಮಾಧ್ಯಮ ಪ್ರಸಾರ ಹಕ್ಕನ್ನು ಇ-ಹರಾಜು ನಡೆಸಲಾಗಿತ್ತು. ಹರಾಜಿನ ಮೂಲ ಬೆಲೆ 900 ಕೋಟಿ ರು.ಗೆ ನಿಗದಿ ಮಾಡಲಾಗಿತ್ತು.

ಈ ನಡುವೆ ಹರಾಜು ಪ್ರಕ್ರಿಯೆ ಬಗ್ಗೆ ಕೆಲ ಫ್ರಾಂಚೈಸಿ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಲೀಗ್‌ನ ಮಾಲಿಕತ್ವದಲ್ಲಿ ಶೇ.74 ಪಾಲು ಹೊಂದಿರುವ ಸ್ಟಾರ್‌ ಸಂಸ್ಥೆಯೇ ಹೊಂದಿದೆ.

photo for representation purpose