ಬೆಂಗಳೂರು,ಏಪ್ರಿಲ್,12,2021(www.justkannada.in) : ಮೈಸೂರಿನ ಲಲಿತಮಹಲ್ ಅರಮನೆಗಾಗಿ ಹೆಲಿಪ್ಯಾಡ್ ನಿರ್ಮಿಸಲು 600ಕ್ಕೂ ಹೆಚ್ಚು ಮರಗಳನ್ನು ಕಡಿಯುವ ನಿರ್ಧಾರವನ್ನು ಬಿಜೆಪಿ ಸರ್ಕಾರ ತಕ್ಷಣ ಕೈಬಿಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಲಲಿತಮಹಲ್ ಅರಮನೆಗಾಗಿ ಹೆಲಿಪ್ಯಾಡ್ ನಿರ್ಮಿಸಲು 600ಕ್ಕೂ ಹೆಚ್ಚು ಮರಗಳನ್ನು ಕಡಿಯುವ ನಿರ್ಧಾರದ ವಿರುದ್ಧ ಸಿಡಿದೆದ್ದಿರುವ ನನ್ನ ಮೈಸೂರಿನ ಜನತೆಯ ಜೊತೆ ನಾನೂ ಇದ್ದೇನೆ ಎಂದು ತಿಳಿಸಿದ್ದಾರೆ.
ಕೃಪೆ-internet
key words : Build-helipad-Trees-Cutting-Decision-Government-Immediately-abandoned-Ex CM-Siddaramaiah






