Friday, July 31, 2026

BDA Apartments

Home Front Page ವಿಜಯೇಂದ್ರ ಹೇಳಿದರೆ ರಾತ್ರೋರಾತ್ರಿ ಹಣ ಬಿಡುಗಡೆಯಾಗುತ್ತದೆ, ಅವರು ಯಾವ ಸಂವಿಧಾನಿಕ ಹುದ್ದೆಯಲ್ಲಿದ್ದಾರೆ? : ಶಾಸಕ ಬಸನಗೌಡ...

ವಿಜಯೇಂದ್ರ ಹೇಳಿದರೆ ರಾತ್ರೋರಾತ್ರಿ ಹಣ ಬಿಡುಗಡೆಯಾಗುತ್ತದೆ, ಅವರು ಯಾವ ಸಂವಿಧಾನಿಕ ಹುದ್ದೆಯಲ್ಲಿದ್ದಾರೆ? : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಬೆಂಗಳೂರು,ಏಪ್ರಿಲ್,02,2021(www.justkannada.in) : ಮುಖ್ಯಮಂತ್ರಿ ಮತ್ತು ವಿಜಯೇಂದ್ರ ಹೇಳಿದರೆ ರಾತ್ರೋರಾತ್ರಿ ಹಣ ಬಿಡುಗಡೆಯಾಗುತ್ತದೆ. ಕೊಪ್ಪಳಕ್ಕೆ ಹಣ ಬಿಡುಗಡೆ ಮಾಡಿದ್ದಕ್ಕೆ ವಿಜಯೇಂದ್ರಗೆ ಅಭಿನಂದನೆ ಸಲ್ಲಿಸಲಾಗಿದೆ. ಅವರು ಯಾವ ಸಂವಿಧಾನಿಕ ಹುದ್ದೆಯಲ್ಲಿದ್ದಾರೆ? ಅಪ್ಪ-ಮಗ ಕಾವೇರಿ ಮನೆಯಲ್ಲಿ ಕೂತು ಎಲ್ಲಾ ಇಲಾಖೆಗಳನ್ನು ಡೀಲ್ ಮಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕಿಸಿದ್ದಾರೆ.Illegally,Sand,carrying,Truck,Seized,arrest,driverಯಾವುದಕ್ಕೆ ಸಚಿವ ಸಂಪುಟ ಬೇಕು? ಮುಖ್ಯಮಂತ್ರಿಗಳು ಎಂದರೆ ಏನು? ನೀವು ಎಲ್ಲಾ ಇಲಾಖೆಯಲ್ಲಿಯೂ ಹಸ್ತಕ್ಷೇಪ ಮಾಡುತ್ತೀರಿ. ಹೀಗಾಗಿ, ಎಲ್ಲಾ ಮಂತ್ರಿಗಳು ಯಾಕೆ ಬೇಕು, ನೀವು ಮುಖ್ಯಮಂತ್ರಿಯಾಗಿರಿ. ಉಳಿದೆಲ್ಲಾ ಖಾತೆಗಳನ್ನು ವಿಜಯೇಂದ್ರಗೆ ಕೊಟ್ಟುಬಿಡಿ ಎಂದು ಕಿಡಿಕಾರಿದ್ದಾರೆ.

ಹಣಕಾಸು ಇಲಾಖೆಯಲ್ಲಿ ಒಬ್ಬರು ಕಾರ್ಯದರ್ಶಿ ಇದ್ದರು. ಅವರು ಸಿದ್ದರಾಮಯ್ಯ ಕಾಲದಲ್ಲಿ, ಕುಮಾರಸ್ವಾಮಿ ಕಾಲದಲ್ಲಿಯೂ ಇದ್ದರು. ಮುಖ್ಯಮಂತ್ರಿಗಳು ಹೇಳಿದಂತೆ ಕೇಳಿಕೊಂಡು ಅವರಿಗೆ ಹೊಂದಿಕೊಂಡು ಹೋಗುತ್ತಾರೆ ಎಂದು ಆರೋಪಿಸಿದರು. Vijayendra-told-Overnight-money-released-Which-Constitutional-vacancy?-MLA-Basanagowda Patil Yatnal

10 ಕೋಟಿಗಿಂತ ಹೆಚ್ಚಿನ ಮೊತ್ತದ ಕಾಮಗಾರಿಗೆ ಹಣ ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆಯ ಒಪ್ಪಿಗೆ ಬೇಕು. ಯಾವ ಆಧಾರದ ಮೇಲೆ ಹಣ ಬಿಡುಗಡೆ ಮಾಡಿದಿರಿ?  ಎಂದು ಹಣಕಾಸು ಇಲಾಖೆ ಕಾರ್ಯದರ್ಶಿಗಳನ್ನು ಪ್ರಶ್ನಿಸಿದ್ದಾರೆ.

key words : Vijayendra-told-Overnight-money-released-Which-Constitutional-vacancy?-MLA-Basanagowda Patil Yatnal