“ಈಶ್ವರಪ್ಪ ನನಗೂ ಪತ್ರ ಬರೆದಿದ್ದಾರೆ, “HAPPY ENDING ” ಆಗಲಿದೆ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಮಂಗಳೂರು,ಏಪ್ರಿಲ್,02,2021(www.justkannada.in) : ಈಶ್ವರಪ್ಪ ಎಲ್ಲ ನಾಯಕರಿಗೂ ಪತ್ರ ಬರೆದಂತೆ ನನಗೂ ಪತ್ರ ಬರೆದಿದ್ದಾರೆ. ‌ಪಕ್ಷದ ಮೇಲಿನ ನಂಬಿಕೆಯಿಂದ ಈ ಪತ್ರವನ್ನು ಕೊಟ್ಟಿದ್ದಾರೆ‌. ಇದು ಸುಖಾಂತ್ಯವಾಗಿ ಕೊನೆಗೊಳ್ಳುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

Illegally,Sand,carrying,Truck,Seized,arrest,driver

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಮತ್ತು ಈಶ್ವರಪ್ಪ ಪ್ರಕರಣ ವಿಭಿನ್ನ. ಈಶ್ವರಪ್ಪ ತಮ್ಮ ಅನುದಾನದ ಬಗ್ಗೆ ಮಾತನಾಡಿದ್ದಾರೆ. ಆದರೆ, ಶಾಸಕ ಯತ್ನಾಳ್ ಅವರಿಗೆ ಪಕ್ಷದ ನೆಲೆಯಲ್ಲಿ ನೋಟಿಸ್ ಕೊಡಲಾಗಿದೆ. ಎಲ್ಲವೂ ಶೀಘ್ರದಲ್ಲಿ ಪರಿಹಾರವಾಗಲಿದೆ ಎಂದಿದ್ದಾರೆ.

ಈಶ್ವರಪ್ಪ ಹಿರಿಯ ನಾಯಕರು. ಕುಳಿತುಕೊಂಡು ಚರ್ಚೆ ಮಾಡಬಹುದಿತ್ತು. ಆದರೆ, ಅವರು ಪತ್ರ ಕೊಟ್ಟಿದ್ದಾರೆ. ಈ ಬಗ್ಗೆ ಈಶ್ವರಪ್ಪ ಅವರಲ್ಲಿ ಮಾತನಾಡಿದ್ದೇನೆ. ಯಾವ ಸಮಸ್ಯೆಯೂ ಆಗದಂತೆ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು.

key words : Ishwarappa-Me-Letter-Wrote-happy ending-BJP President-Nalin Kumar Kateel