Thursday, September 24, 2026

BDA Apartments

Home Front Page ಸಿಎಂ ಬಿಎಸ್ ವೈ ವಿರುದ್ಧ ಸಚಿವ ಈಶ್ವರಪ್ಪ ಪತ್ರ ವಿಚಾರ: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್...

ಸಿಎಂ ಬಿಎಸ್ ವೈ ವಿರುದ್ಧ ಸಚಿವ ಈಶ್ವರಪ್ಪ ಪತ್ರ ವಿಚಾರ: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಪ್ರತಿಕ್ರಿಯೆ ಏನು ಗೊತ್ತೆ..?

ನವದೆಹಲಿ,ಏಪ್ರಿಲ್,1,2021(www.justkannada.in): ಏನೇ ಮನಸ್ತಾಪವಿದ್ದರೂ ಸಿಎಂ ಜತೆ ಚರ್ಚಿಸಬೇಕು. ಅವರು ಹೀಗೆ ಪತ್ರ ಬರೆಯಬಾರದಿತ್ತು ಎಂದು ಸಚಿವ ಕೆ.ಎಸ್ ಈಶ್ವರಪ್ಪ ಸಿಎಂ ವಿರುದ್ಧ ಪತ್ರ ಬರೆದ ವಿಚಾರ ಕುರಿತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.Illegally,Sand,carrying,Truck,Seized,arrest,driver

ಈ ವಿಚಾರ ಕುರಿತು ಮಾತನಾಡಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಅವರು ಹೀಗೆ ಬಹಿರಂಗವಾಗಿ ಪತ್ರ ಬರೆಯಬಾರದಿತ್ತು. ಏನೇ ಮನಸ್ತಾಪವಿದ್ದರೂ ಸಿಎಂ ಜತೆ ಚರ್ಚಿಸಬೇಕು. ರಾಜ್ಯಪಾಲರಿಗೂ ಪತ್ರ ಬರೆಯಬಾರದಿತ್ತು. ಪಕ್ಷದ ವೇದಿಕೆಯಲ್ಲೇ ಪ್ರಸ್ತಾಪ ಮಾಡಬೇಕು. ಯಾವ ಸಚಿವರು ಈ ರೀತಿ ಪತ್ರ ಬರೆಯಬಾರದು ಎಂದು ಸಲಹೆ ನೀಡಿದರು.Minister-KS  Eswarappa- letter –against- CM BS yeddyurappa

ಈವರೆಗೆ ನನಗೆ ಯಾವುದೇ ಪತ್ರ ಬಂದು ತಲುಪಿಲ್ಲ. ಸದ್ಯ ಉಪಚುನಾವಣೆ ಗೆಲ್ಲುವುದೇ ನಮ್ಮ ಗುರಿ. ಬಳಿಕ ಪತ್ರದ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ಅರುಣ್ ಸಿಂಗ್ ತಿಳಿಸಿದರು. ಇನ್ನು ಕಾಂಗ್ರೆಸ್ ಭ್ರಷ್ಟಾಚಾರ. ಷಡ್ಯಂತ್ರ. ಸುಳ್ಳಿನ ಕಂತೆಯಲ್ಲಿ ನಂಬಿಕೆ ಇಟ್ಟಿದೆ ಎಂದು ಟೀಕಿಸಿದರು.

Key words: Minister-KS  Eswarappa- letter –against- CM BS yeddyurappa