Monday, November 2, 2026

Dasara Wishes

Happy Dasara
Home Front Page “ಸಿಡಿ ಪ್ರಕರಣ, ಏನು ಹೇಳಬೇಕೋ ಅದನ್ನೆಲ್ಲವನ್ನೂ ಹೇಳಿರುವೆ” : ಯುವತಿಯ ತಂದೆ ಹೇಳಿಕೆ 

“ಸಿಡಿ ಪ್ರಕರಣ, ಏನು ಹೇಳಬೇಕೋ ಅದನ್ನೆಲ್ಲವನ್ನೂ ಹೇಳಿರುವೆ” : ಯುವತಿಯ ತಂದೆ ಹೇಳಿಕೆ 

ಬೆಂಗಳೂರು,ಮಾರ್ಚ್,28,2021(www.justkannada.in) : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಏನನ್ನೂ ಕೇಳಬೇಡಿ. ಮತ್ತೆ ನಿಮ್ಮ ಬಳಿಗೆ ಬರುತ್ತೇನೆ. ಏನು ಹೇಳಬೇಕೋ ಅದನ್ನೆಲ್ಲವನ್ನೂ ಹೇಳಿರುವೆ ಎಂದು ಯುವತಿಯ ತಂದೆ ಹೇಳಿದ್ದಾರೆ.jkಯುವತಿಯ ಪೋಷಕರನ್ನು ಎಸ್​ಐಟಿ ತಂಡದವರು ಬೆಂಗಳೂರಿನಿಂದ ಬೆಳಗಾವಿಗೆ ಕರೆ ತಂದು ಇಲ್ಲಿನ ಎಪಿಎಂಸಿ ಠಾಣೆಗೆ ಭಾನುವಾರ ಮುಂಜಾನೆ ಹಸ್ತಾಂತರಿಸಿದ್ದಾರೆ.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಗಳು ಬಿಡುಗಡೆ ಮಾಡಿರುವ ಮತ್ತೊಂದು ವಿಡಿಯೊ ಹೇಳಿಕೆ ನೋಡಿದ್ದೇನೆ. ಸದ್ಯಕ್ಕೆ ಆ ಬಗ್ಗೆ ಮಾತನಾಡಲಾರೆ. ನಾವು ನೆಮ್ಮದಿಯಿಂದ ಇರಲು ಬಿಡಿ ಎಂದು ಕೋರಿದ್ದಾರೆ.

ಎಸ್‌ಐಟಿ ತಂಡದ ಎಸಿಪಿ ಪರಮೇಶ್ವರ್ ನೇತೃತ್ವದಲ್ಲಿ 16 ಎಸ್‌ಐಟಿ ಸಿಬ್ಬಂದಿಯ ತಂಡ ಎಪಿಎಂಸಿ ಪೊಲೀಸ್ ಠಾಣೆಗೆ ಬಂದು, ಸಂತ್ರಸ್ತೆಯ ಕುಟುಂಬದವರನ್ನು ತಲುಪಿಸಿದರು. ಬಳಿಕ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.CD case,What,Tell me,All,said,statement,woman,fatherಠಾಣೆಯ ಸಿಪಿಐ ದಿಲೀಪ್‌ಕುಮಾರ್ ಒಂದು ಗಂಟೆಗೂ ಹೆಚ್ಚು ಕಾಲ ಯುವತಿಯ ಕುಟುಂಬದವರನ್ನು ವಿಚಾರಣೆಗೆ ಒಳಪಡಿಸಿದರು. ಬಳಿಕ‌ ನಗರದಲ್ಲಿ ಕುಟುಂಬ ವಾಸವಿದ್ದ ಬಾಡಿಗೆ ಮನೆಗೆ ಕರೆದೊಯ್ಯಲಾಗಿದೆ. ಮನೆ ಬಳಿ ಎಎಸ್‌ಐ, ಮೂವರು ಕಾನ್‌ಸ್ಟೆಬಲ್‌ಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.

key words : CD case-What-Tell me-All-said-statement-woman-father