Tuesday, August 4, 2026

BDA Apartments

Home Front Page ಆ ಯುವತಿ ಯಾರದ್ದೋ ಕುತಂತ್ರಕ್ಕೆ ಒಳಗಾಗಿದ್ದಾಳೆ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ….

ಆ ಯುವತಿ ಯಾರದ್ದೋ ಕುತಂತ್ರಕ್ಕೆ ಒಳಗಾಗಿದ್ದಾಳೆ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ….

ಬಸವ ಕಲ್ಯಾಣ,ಮಾರ್ಚ್,25,2021(www.justkannada.in):  ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಯಾರದ್ದೋ ಕುತಂತ್ರಕ್ಕೆ ಒಳಗಾಗಿದ್ದಾಳೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.jk

ಸಿಡಿಯಲ್ಲಿನ ಯುವತಿ 2ನೇ ವಿಡಿಯೋ ಬಿಡುಗಡೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬಸವ ಕಲ್ಯಾಣದಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಆ ಯುವತಿ ಯಾರದ್ದು ಕುತಂತ್ರಕ್ಕೆ ಒಳಗಾಗಿದ್ದಾಳೆ. ರಹಸ್ಯಸ್ಥಳದಿಂದ ವಿಡಿಯೋ ಬಿಡುಗಡೆ ಮಾಡೋದನ್ನ ಬಿಡಿ.  ನ್ಯಾಯ ಬೇಕಿದ್ರೆ ಸಿಜೆಯನ್ನ ಭೇಟಿಯಾಗಿ ರಕ್ಷಣೆ ಪಡೆಯಲಿ.  ವಿಪಕ್ಷನಾಯಕರನ್ನ ಭೇಟಿಯಾಗಿ ರಕ್ಷಣೆ ಪಡೆಯಲಿ.  ರಾಜ್ಯ ಸರ್ಕಾರದ ಮೇಲೆ ನಿಮಗೆ ನಂಬಿಕೆ ಇಲ್ಲದಿದ್ದರೇ ಪ್ರಧಾನಿ ಮೋದಿಗೆ ಸಂದೇಶ ಕಳುಹಿಸಿ ರಕ್ಷಣೆ ಪಡೆಯಿರಿ ಎಂದು ಹೇಳಿದರು.ramesh jarkiholi-CD case- young woman – intrigued- Former CM -HD Kumaraswamy.

ನೀವು ಯಾರದೋ ಒತ್ತಡಕ್ಕೆ ಒಳಗಾಗಿ ಗುಪ್ತವಾದ ಸ್ಥಳಗಳಲ್ಲಿ ಕುಳಿತು ಸಿಡಿ ಮೂಲಕ ಮಾತನಾಡುವುದು ಬೇಡ. ನಿಮ್ಮ ತಂದೆ ತಾಯಿಗೆ ರಕ್ಷಣೆ ಸಿಗ್ಬೇಕು. ನಿಮ್ಗೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲದಿದ್ರೆ, ಪ್ರಧಾನಿ ಮೋದಿಯವ್ರಿಗೆ ಮನವಿ ಮಾಡಿ ಅವ್ರ ರಕ್ಷಣೆಯನ್ನ ಪಡೆಯಿರಿ’  ಎಂದು ಹೆಚ್.ಡಿ ಕುಮಾರಸ್ವಾಮಿ ಸಲಹೆ ನೀಡಿದರು.

Key words: ramesh jarkiholi-CD case- young woman – intrigued- Former CM -HD Kumaraswamy.