ಮಾರ್ಚ್ 27 ರಂದು ಲೋಕ್ ಅದಾಲತ್: 8,954 ಪ್ರಕರಣಗಳು ರಾಜಿ ಸಾಧ್ಯತೆ- ರಾಮಚಂದ್ರ ಡಿ. ಹುದ್ದಾರ್

ಮೈಸೂರು,ಮಾರ್ಚ್,25,2021(www.justkannada.in): ಮಾರ್ಚ್ 27 ರಂದು  ನಡೆಯಲಿರುವ ಲೋಕ್ ಅದಾಲತ್ ನಲ್ಲಿ ರಾಜಿಗಾಗಿ 24,951 ಪ್ರಕರಣಗಳನ್ನ ಗುರುತಿಸಲಾಗಿದ್ದು, ಈ ಪೈಕಿ  8,954 ಪ್ರಕರಣಗಳು ರಾಜಿ ಸಾಧ್ಯತೆ ಇದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ರಾಮಚಂದ್ರ ಡಿ. ಹುದ್ದಾರ್ ತಿಳಿಸಿದರು.jk

ಮಾರ್ಚ್ 27 ರಂದು ನಡೆಯುವ ಲೋಕ್ ಅದಾಲತ್ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ರಾಮಚಂದ್ರ ಡಿ. ಹುದ್ದಾರ್ ಅವರು, ಮೈಸೂರು ನಗರ ಮತ್ತು ನ್ಯಾಯಾಲಯಗಳಲ್ಲಿ 1,09,235 ಬಾಕಿಯಿರುವ ಪ್ರಕರಣಗಳ ಸಂಖ್ಯೆ, ಒಟ್ಟಾರೆ ಪ್ರಕರಣಗಳ ಪೈಕಿ 84,765 ರಾಜಿಯಾಗುವ ಪ್ರಕರಣಗಳ ಸಂಖ್ಯೆ, ಅವುಗಳ ಪೈಕಿ ಲೋಕ್ ಅದಾಲತ್ ನಲ್ಲಿ ರಾಜಿಗಾಗಿ 24,951 ಪ್ರಕರಣಗಳನ್ನ ಗುರುತಿಸಲಾಗಿದೆ. 24,951 ಪ್ರಕರಣಗಳ ಪೈಕಿ 8,954 ಪ್ರಕರಣಗಳು ರಾಜಿಯಾಗುವ ಸಾಧ್ಯತೆ ಇದೆ ಎಂದರು.

ಲೋಕ್ ಅದಾಲತ್ ನಲ್ಲಿ ಎಲ್ಲಾ ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳು, ಮೋಟಾರ್ ವಾಹನ ಅಪಘಾತದ ಕುರಿತಾದ ಪ್ರಕರಣಗಳು, ಕೌಟುಂಬಿಕ ಪ್ರಕರಣಗಳು, ದೌರ್ಜನ್ಯ ತಡೆ ಕಾಯ್ದೆಯ ಪ್ರಕರಣಗಳು, ಜೀವನಾಂಶ ಪ್ರಕರಣಗಳು ಹಾಗೂ ನ್ಯಾಯಾಲಯದಲ್ಲಿ ದಾಖಲಾಗದೇ ಇರುವಂತಹ ಪ್ರಕರಣಗಳ ವಿಚಾರಣೆ ನಡೆಯಲಿದೆ. ವ್ಯಾಜ್ಯವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳುವಲ್ಲಿ ಲೋಕ್ ಅದಾಲತ್ ಸಹಕಾರಿಯಾಗಲಿದೆ.  ಕಕ್ಷಿದಾರರಿಗೆ ಲೋಕ್ ಅದಾಲತ್ ನಲ್ಲಿ ಸಮಯದ ಉಳಿತಾಯ, ಪ್ರಕರಣ ರಾಜಿಯಾದಲ್ಲಿ ಶೇ 100 ರಷ್ಟು ನ್ಯಾಯಾಲಯ ಶುಲ್ಕ ಹಿಂದಿರುಗಿಸುವಿಕೆ ಸೇರಿದಂತೆ ಹಲವು ಲಾಭಗಳ ಪ್ರಯೋಜನ ಸಿಗಲಿದೆ ಎಂದು ತಿಳಿಸಿದರು.lok-adalat-march-27th-mysore-ramachandra-d-huddar

ತಪಾಸಣೆ ವೇಳೆ ಬೈಕ್ ನಿಂದ ಬಿದ್ದು ಸವಾರ ಸಾವನ್ನಪ್ಪಿದ ಪ್ರಕರಣ ಸಂಬಂಧ ಮೈಸೂರು ಟ್ರಾಫಿಕ್‌ ಪೊಲೀಸರ ವಿರುದ್ದ ಜನರ ಆಕ್ರೋಶ ವಿಚಾರ ಕುರಿತು ಮಾತನಾಡಿದ ಜಿಲ್ಲಾ ಪ್ರಧಾನ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ್, ಈ ವಿಚಾರವಾಗಿ ಟ್ರಾಫಿಕ್ ಇನ್ಸ್‌ ಪೆಕ್ಟರ್‌ ಬಂದಾಗ ಒತ್ತಾಯ ಮಾಡಬೇಡಿ ಅಂತ ಮನವಿ ಮಾಡಿದ್ದೇನೆ. ದೂರದಲ್ಲಿ ನಿಂತು ವಾಹನ ತಪಾಸಣೆ ಮಾಡಿ. ಡಿಎಲ್‌, ಲೈಸೆನ್ಸ್ ತಪಾಸಣೆ ಮಾಡಿ. ಆದರೆ ವಾಹನ ಸವಾರರು ಭಯ ಪಡುವ ಹಾಗೆ ನಡೆದುಕೊಳ್ಳಬೇಡಿ ಅಂತ ಮನವಿ ಮಾಡಿದ್ದೇನೆ ಎಂದರು.

Key words: Lok Adalat – March 27th-mysore-Ramachandra d Huddar