Friday, July 31, 2026

BDA Apartments

Home Front Page ಉಪ ಚುನಾವಣೆಗೆ ಕೊರೋನಾ ರೂಲ್ಸ್ ಅನ್ವಯವಾಗಲ್ಲ ಎಂದ ಸಿಎಂ ಬಿಎಸ್ ವೈ ವಿರುದ್ದ ಹೆಚ್.ಡಿ ಕುಮಾರಸ್ವಾಮಿ...

ಉಪ ಚುನಾವಣೆಗೆ ಕೊರೋನಾ ರೂಲ್ಸ್ ಅನ್ವಯವಾಗಲ್ಲ ಎಂದ ಸಿಎಂ ಬಿಎಸ್ ವೈ ವಿರುದ್ದ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ..

ರಾಮನಗರ,ಮಾರ್ಚ್,20,2021(www.justkannada.in): ಉಪ ಚುನಾವಣೆಗೆ ಕೊರೋನಾ ರೂಲ್ಸ್ ಅನ್ವಯವಾಗುವುದಿಲ್ಲ ಎಂದು ಹೇಳಿಕೆ ನೀಡಿರುವ ಸಿಎಂ  ಬಿಎಸ್ ಯಡಿಯೂರಪ್ಪ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.jk

ಈ ಕುರಿತು ಇಂದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಚುನಾವಣೆಗೆ ಕೊರೋನಾ ಬರಲ್ವಾ. ಸರಕಾರವೇ ಕೊರೋನಾಗೆ ನಿಯಮಗಳನ್ನ ಮಾಡಿ ಮತ್ತೆ ಚುನಾವಣೆಗೆ ಅನ್ವಯ ಇಲ್ಲಾ ಅಂದ್ರೆ ಹೇಗೆ..? ಏನ್ ಚುನಾವಣೆಗೆ ಕೊರೋನಾ ಹೆದುರಿಕೊಂಡು ಓಡಿ ಹೋಗುತ್ತಾ..? ನಮ್ಮಗಳಿಗೆ ಬೇಕಾದಂತೆ ಮಾರ್ಪಾಡು ಮಾಡಿಕೊಂಡು ಅನಾಹುತಗಳಿಗೆ ದಾರಿ ಮಾಡಿಕೊಡಬಾರದು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. HD Kumaraswamy- outrage-against -CM BS Yeddyurappa- corona rules -not applicable

ಇನ್ನು ಉಪ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧೆ ಮಾಡುತ್ತೆ. ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡುವ ನಿರ್ಣಯ ಮಾಡಲಾಗಿದೆ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

Key words:  HD Kumaraswamy- outrage-against -CM BS Yeddyurappa- corona rules -not applicable