Sunday, September 20, 2026

BDA Apartments

Home Front Page ಲಾಂಗ್ ಜಂಪ್’ನಲ್ಲಿ ರಾಷ್ಟ್ರೀಯ ದಾಖಲೆ: ಶ್ರೀಶಂಕರ್ ಟೋಕಿಯೊ ಒಲಿಂಪಿಕ್ಸ್ ಟಿಕೆಟ್!

ಲಾಂಗ್ ಜಂಪ್’ನಲ್ಲಿ ರಾಷ್ಟ್ರೀಯ ದಾಖಲೆ: ಶ್ರೀಶಂಕರ್ ಟೋಕಿಯೊ ಒಲಿಂಪಿಕ್ಸ್ ಟಿಕೆಟ್!

ಬೆಂಗಳೂರು, ಮಾರ್ಚ್ 17, 2021 (www.justkannada.in):

ಲಾಂಗ್ ಜಂಪ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿರುವ ಮುರಳಿ ಶ್ರೀಶಂಕರ್ ಟೋಕಿಯೊ ಒಲಿಂಪಿಕ್ಸ್‌ಗೆ ಮಂಗಳವಾರ ಅರ್ಹತೆ ಪಡೆದಿದ್ದಾರೆ.

ಫೆಡರೇಶನ್ ಕಪ್‌ನಲ್ಲಿ ತಮ್ಮ ಅಂತಿಮ ಪ್ರಯತ್ನದಲ್ಲಿ 8.26 ಮೀಟರ್ ಜಿಗಿದ ನಂತರ 21 ವರ್ಷದ ಶ್ರೀಶಂಕರ್ ರಾಷ್ಟ್ರೀಯ ದಾಖಲೆ ನಿರ್ಮಿಸಿದರು ಮತ್ತು ಇದರೊಂದಿಗೆ ಅವರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು.

ಮುರಳಿ ಶ್ರೀಶಂಕರ್ ತಮ್ಮದೇ ಆದ 8.20 ಮೀಟರ್ ದಾಖಲೆಯನ್ನು ಮುರಿದಿದ್ದಾರೆ. 8.22 ಮೀಟರ್ ಒಲಿಂಪಿಕ್ ಅರ್ಹತಾ ಗುರಿಯನ್ನು ಮೀರಿಸಿದ್ದಾರೆ ಎಂದು ಭಾರತದ ಕ್ರೀಡಾ ಪ್ರಾಧಿಕಾರ ಟ್ವೀಟ್ ಮಾಡಿದೆ.