Saturday, October 10, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Front Page ಅಪರೇಷನ್ ಗೆ 7.98 ಲಕ್ಷ ರೂ. ಹಣದ ಅವಶ್ಯಕತೆ  : ಸಹಾಯ ಹಸ್ತ ಚಾಚಿದ ಬಾಲಕಿಯ...

ಅಪರೇಷನ್ ಗೆ 7.98 ಲಕ್ಷ ರೂ. ಹಣದ ಅವಶ್ಯಕತೆ  : ಸಹಾಯ ಹಸ್ತ ಚಾಚಿದ ಬಾಲಕಿಯ ಕುಟುಂಬ….

ಬೆಂಗಳೂರು,ಮಾರ್ಚ್,16,2021(www.justkannada.in): ಬಡತನದಲ್ಲಿ ಜೀವನ ಸಾಗಿಸುತ್ತಿರುವ ವೈಭವಿ ಎಂಬ ಹೆಸರಿನ ಬಾಲಕಿಗೆ ಮಾತನಾಡಲು ಬಾರದೆ, ಕಿವಿಯೂ ಕೇಳಿಸದೆ ಇರುವುದರಿಂದ  ಅಪರೇಷನ್ ಮಾಡಲು ಲಕ್ಷಾಂತರ ರೂ ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿದ್ದು ಈ ಹಿನ್ನೆಲೆಯಲ್ಲಿ ಬಾಲಕಿಯ ಕುಟುಂಬ ಸಹಾಯ ಹಸ್ತ ಚಾಚಿದೆ.jk

ವೈಭವಿ ಎಸ್ ಬಾಲಕಿಗೆ  ಎರಡು ಕಿವಿಗಳು ಕೇಳಿಸುವುದಿಲ್ಲ. ಹಾಗೆಯೇ ಮಾತನಾಡಲು ಸಹ ಬರುವುದಿಲ್ಲ. ಈಗ ಬಾಲಕಿಗೆ ಮಾತನಾಡಲು ಮತ್ತು ಕಿವಿ ಕೇಳಿಸುವಂತಾಗಲು ಆಪರೇಷನ್ ಮಾಡಬೇಕಾಗಿದೆ. ಆಪರೇಷನ್ ಗಾಗಿ 7,98000 ರೂ ಆಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಮಧ್ಯೆ ಹಲವು ವರ್ಷಗಳ ಹಿಂದೆ ವೈಭವಿಯ ತಂದೆ ಅಪಘಾತದಲ್ಲಿ ಸಿಲುಕಿ ದುಡಿಯಲು ಆಗದ ಪರಿಸ್ಥಿತಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಈಗ KEETO ಎಂಬ ಸಂಸ್ಥೆ ವೈಭವಿಯ  ನೆರವಿಗೆ ಧಾವಿಸಿದ್ದು ಸಹಾಯ ಹಸ್ತ ನೀಡಲು ಮುಂದಾಗಿದೆ, ಆದರೂ ಸಹ ಅಪರೇಷನ್ ಗೆ ಹೆಚ್ಚಿನ ಹಣದ ಅವಶ್ಯಕತೆ ಇದೆ. ಹೀಗಾಗಿ ಒಂದೊಂದು ರೂಪಾಯಿ ಸಹ ಬಾಲಕಿ ವೈಭವಿಯ ಭವಿಷ್ಯ ಉಜ್ವಲವಾಗಲು ಸಹಾಯವಾಗುತ್ತದೆ.7,98 lakh - Operation Rs-  need – money-girl's -family - help.

ಅದ್ದರಿಂದ ಬಾಲಕಿಗೆ ಸಹಾಯ ಮಾಡಲು ಇಚ್ಛಿಸುವವರು Donate Now to help https://www.ketto.org/fundraiser/offer-a-helping-hand-to-support-vaibhavi-ss-treatment?utm_medium=whatsappShare&utm_content=3833344&shby=1&utm_source=internal&utm_campaign=offer-a-helping-hand-to-support-vaibhavi-ss-treatment ಲಿಂಕ್ ಬಳಸಿ ಸಹಾಯ ಮಾಡಬಹುದು. ಇನ್ನು ಅಪರೇಷನ್ ಗೆ 45 ದಿನಗಳು ಮಾತ್ರ ಉಳಿದಿದ್ದು ಈ ದಿನಗಳವರೆಗೆ ಲಿಂಕ್ ಮೂಲಕ ನಾಗರಿಕರಿಂದ 60,210 ರೂ ಹಣ ಬಂದಿದೆ.  ಮೊಬೈಲ್ ನಂಬರ್, 9880694144 (ಸುಬ್ರಮಣ್ಯ)

Key words: 7,98 lakh – Operation Rs-  need – money-girl’s -family – help.