Friday, September 11, 2026

BDA Apartments

Home Cinema ತಮಿಳುನಾಡಿನಲ್ಲಿ ಚುನಾವಣಾ ಭರಾಟೆ ಜೋರು: ಕಮಲ್ ಹಾಸನ್ ಮೇಲೆ ದಾಳಿ

ತಮಿಳುನಾಡಿನಲ್ಲಿ ಚುನಾವಣಾ ಭರಾಟೆ ಜೋರು: ಕಮಲ್ ಹಾಸನ್ ಮೇಲೆ ದಾಳಿ

ಬೆಂಗಳೂರು, ಮಾರ್ಚ್ 15, 2021 (www.justkannada.in): 

ಹಿರಿಯ ನಟ ಹಾಗೂ ಮಕ್ಕಳ್ ನೀದಿ ಮಯ್ಯುಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರ ಮೇಲೆ ಕಾಂಚಿಪುರಂನಲ್ಲಿ ದಾಳಿ ನಡೆಸಲಾಗಿದೆ.

ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ಭರಾಟೆ ಜೋರಾಗಿದ್ದು, ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ಕಮಲ್ ಹಾಸನ್ ಅವರ ಮೇಲೆ ಕಾಂಚಿಪುರಂನಲ್ಲಿ ದಾಳಿ ನಡೆದಿದೆ.

ಕಮಲ್ ಕಾರಿನ ಮೇಲೆ ಯುವಕನೊಬ್ಬ ದಾಳಿ ಮಾಡಿದ್ದು ವಾಹನದ ವಿಂಡ್ ಸ್ಕ್ರೀನ್ ಹಾನಿಗೊಳಗಾಗಿದೆ.

ಘಟನೆಯಲ್ಲಿ ಕಮಲ್ ಹಾಸನ್ ಅಪಾಯದಿಂದ ಪಾರಾಗಿದ್ದಾರೆ. ಪಕ್ಷದ ಮುಖಂಡ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಎ.ಜಿ. ಮೌರ್ಯ ಈ ಬಗ್ಗೆ ಮಾಹಿತಿ ನೀಡಿದ್ದಾರೆ.