Saturday, September 19, 2026

BDA Apartments

Home Front Page “ಕಾಂಗ್ರೆಸ್ ಪಕ್ಷದಿಂದ ಪೂರ್ಣಿಮಾ ಸವದತ್ತಿ ಉಚ್ಛಾಟನೆ”

“ಕಾಂಗ್ರೆಸ್ ಪಕ್ಷದಿಂದ ಪೂರ್ಣಿಮಾ ಸವದತ್ತಿ ಉಚ್ಛಾಟನೆ”

ಬೆಂಗಳೂರು,ಫೆಬ್ರವರಿ,28,2021 : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರು ಬಳಸಿಕೊಂಡು ಜನರಿಗೆ ವಂಚನೆ ಮಾಡುತ್ತಿದ್ದ, ಹುಬ್ಬಳ್ಳಿ-ಧಾರವಾಡ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಸವದತ್ತಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

jkಡಿ.ಕೆ.ಶಿವಕುಮಾರ್ ಅವರ ಕಪ್ಪು ಹಣದಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತೇನೆ ಎಂದು ಪೂರ್ಣಿಮಾ ಸವದತ್ತಿ ಅವರು ಜನರನ್ನು ನಂಬಿಸಿ ಲಕ್ಷ, ಲಕ್ಷ ಹಣ ವಸೂಲಿ ಮಾಡಿ ಪರಾರಿಯಾಗಿದ್ದರು. ತನಗೆ ಹತ್ತು ಸಾವಿರ ರೂ. ಹಣ ನೀಡಿದರೆ ಡಿಕೆಶಿಯವರ ಕಪ್ಪು ಹಣದಲ್ಲಿ ಸಾಲ ಕೊಡಿಸುತ್ತೇನೆ ಎಂದು ನಂಬಿಸಿ ಹಲವರಿಂದ ಹಣ ಪಡೆದು ವಂಚಿಸಿದ್ದರು.

Congress-party-Purnima Savadatti-Expulsion 

ಪೂರ್ಣಿಮಾರಿಂದ ವಂಚನೆಗೊಳಗಾದ ಅನೇಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದೀಗ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಎಚ್ಚೆತ್ತ ಕಾಂಗ್ರೆಸ್, ಪೂರ್ಣಿಮಾ ಸವದತ್ತಿಯವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದೆ ಎಂದು ತಿಳಿದು ಬಂದಿದೆ.

key words : Congress-party-Purnima Savadatti-Expulsion