Wednesday, September 30, 2026

BDA Apartments

ನಾಳೆಯಿಂದ ಸಿಬಿಎಸ್’ಸಿ 10, 12ನೇ ತರಗತಿ ಪ್ರಾಯೋಗಿಕ ಪರೀಕ್ಷೆ ಶುರು BDA JK_Adv BDA Adv
Home Front Page ನಾಳೆಯಿಂದ ಸಿಬಿಎಸ್’ಸಿ 10, 12ನೇ ತರಗತಿ ಪ್ರಾಯೋಗಿಕ ಪರೀಕ್ಷೆ ಶುರು

ನಾಳೆಯಿಂದ ಸಿಬಿಎಸ್’ಸಿ 10, 12ನೇ ತರಗತಿ ಪ್ರಾಯೋಗಿಕ ಪರೀಕ್ಷೆ ಶುರು

ಬೆಂಗಳೂರು, ಫೆಬ್ರವರಿ 28, 2021 (www.justkannada.in): ಕೇಂದ್ರೀಯ ಪ್ರೌಢ ಪರೀಕ್ಷಾ ಮಂಡಳಿ (ಸಿಬಿಎಸ್ ಇ) 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಸೋಮವಾರದಿಂದ (ಮಾರ್ಚ್ 1) ಪ್ರಾಯೋಗಿಕ ಪರೀಕ್ಷೆಗಳು ಆರಂಭವಾಗಲಿವೆ.

ಮಂಡಳಿಯು ಶಾಲೆಗಳಿಗೆ ಪ್ರಾಯೋಗಿಕ ಪರೀಕ್ಷೆಗಳನ್ನು ಜೂನ್ 11ರೊಳಗೆ ಪೂರ್ಣಗೊಳಿಸಲು ಅನುಮತಿ ನೀಡಿದೆ. ಆಯಾ ಶಾಲೆಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಮೌಲ್ಯಮಾಪನ ಮುಗಿದ ತಕ್ಷಣ ಅಂಕಗಳನ್ನು ಅಧಿಕಾರಿಗಳು ಅಪ್ ಲೋಡ್ ಮಾಡಬೇಕಿದೆ.

ಪರೀಕ್ಷಾ ಸಮಯದಲ್ಲಿ ಆಂತರಿಕ ಮತ್ತು ಬಾಹ್ಯ ಪರೀಕ್ಷಕರು ಹಾಜರಿರಲಿದ್ದಾರೆ ಎಂದು ಪ್ರಾಂಶುಪಾಲರು ಮತ್ತು ಮುಖ್ಯಶಿಕ್ಷಕರು ಗಳಿಗೆ ಬರೆದ ಪತ್ರದಲ್ಲಿ ಮಂಡಳಿ ತಿಳಿಸಿದೆ.