Saturday, August 1, 2026

BDA Apartments

Home Front Page ರಿಂಗ್ ರಸ್ತೆಗಳಲ್ಲಿ 75 ಸಿಸಿ ಕ್ಯಾಮರಾ ಅಳವಡಿಕೆಗೆ ಚಿಂತನೆ- ಸಂಸದ ಪ್ರತಾಪ್ ಸಿಂಹ…

ರಿಂಗ್ ರಸ್ತೆಗಳಲ್ಲಿ 75 ಸಿಸಿ ಕ್ಯಾಮರಾ ಅಳವಡಿಕೆಗೆ ಚಿಂತನೆ- ಸಂಸದ ಪ್ರತಾಪ್ ಸಿಂಹ…

ಮೈಸೂರು,ಫೆಬ್ರವರಿ,16,2021(www.justkannada.in): ರಿಂಗ್ ರಸ್ತೆಗಳಲ್ಲಿ 75 ಸಿಸಿ ಕ್ಯಾಮರ ಅಳವಡಿಕೆಗೆ ಚಿಂತನೆ ಮಾಡಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.jk

ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದ ಪ್ರತಾಪ್ ಸಿಂಹ, ರಿಂಗ್ ರಸ್ತೆಯಲ್ಲಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ. 43 ಕಿ.ಮಿ ರಿಂಗ್ ರಸ್ತೆಗೆ  ವಿವಿಧ ಕಡೆಗಳಲ್ಲಿ ಅಳವಡಿಕೆ ಮಾಡಲಾಗುವುದು. ಎಪಿಎಂಸಿ ಜಂಕ್ಷನ್ ನಿಂದ ಕೆ ಆರ್ ಎಸ್ ರಸ್ತೆ ಜಂಕ್ಷನ್ ವರೆಗೆ ಅಳವಡಿಕೆ ಮಾಡಲಾಗುತ್ತದೆ. ಮಹಾನಗರ ಪಾಲಿಕೆ, ಮೂಡ, ಜಿಲ್ಲಾಪಂಚಾಯತ್ ತಾಪಂ ಸಹಭಾಗಿತ್ವದಲ್ಲಿ ಸಿಸಿ ಕ್ಯಾಮರ ಅಳವಡಿಕೆ ಮಾಡಲಾಗುವುದು ಎಂದರು.75cc-camera-installation-ring-road-mp-pratap-simha

ಸಾರ್ವಜನಿಕ ವಿರೂಪಗೊಳಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿವುದು. ಇದು ಫ್ಲೆಕ್ಸ್ ಬ್ಯಾನರ್ ಅಳವಡಿಕೆಗೂ ಅನ್ವಯ ಆಗಲಿದೆ. ಯಾವುದೇ ಪಕ್ಷದವರಾದರೂ ಸರಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

Key words: 75cc camera- installation – ring road-MP Pratap Simha …