Tuesday, September 29, 2026

BDA Apartments

ಹುಣಸೂರಿನಲ್ಲಿ ಮೂರು ಪ್ರತ್ಯೇಕ ರಸ್ತೆ ಅಪಘಾತ: ಮೂವರು ಸಾವು… BDA JK_Adv BDA Adv
Home Crime ಹುಣಸೂರಿನಲ್ಲಿ ಮೂರು ಪ್ರತ್ಯೇಕ ರಸ್ತೆ ಅಪಘಾತ: ಮೂವರು ಸಾವು….

ಹುಣಸೂರಿನಲ್ಲಿ ಮೂರು ಪ್ರತ್ಯೇಕ ರಸ್ತೆ ಅಪಘಾತ: ಮೂವರು ಸಾವು….

ಮೈಸೂರು,ಫೆಬ್ರವರಿ,16,2021(www.justkannada.in): ಹುಣಸೂರಿನಲ್ಲಿ ಮೂರು ಪ್ರತ್ಯೇಕ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.jk

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವಿವಿಧೆಡೆ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ವಕೀಲ ವಿನೋದ್ ರಾಜ್ (43) ಸಂಪತ್ ಪವಾರ್ ( 34)  ಜಯಮ್ಮ (54) ಮೃತಪಟ್ಟಿದ್ದಾರೆ. ಆಯರಹಳ್ಳಿ ಬಳಿ ಬೈಕ್‌ ನಲ್ಲಿ ಆಯತಪ್ಪಿ ಬಿದ್ದು  ವಕೀಲ ವಿನೋದ್ ಸಾವನ್ನಪ್ಪಿದ್ದಾರೆ.

ಇನ್ನೊಂದೆಡೆ ಸಣ್ಣೇಗೌಡರ ಕಾಲೋನಿ ಬಳಿ ಎರಡು ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಘಟನೆಯಲ್ಲಿ ಸಂಪತ್ ಪವಾರ್ ಸಾವನ್ನಪ್ಪಿದ್ದಾರೆ. ಇನ್ನು ಬೀಜಗನಹಳ್ಳಿ ಬಳಿ ಗೂಡ್ಸ್ ವಾಹನ ಡಿಕ್ಕಿಯಾಗಿ ರೈತ ಮಹಿಳೆ ಜಯಮ್ಮ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ.Mother-son- dies – bike- collides - power pole

ಎರಡು ಪ್ರಕರಣ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ. ವಕೀಲ ವಿನೋದ್ ಅಪಘಾತ ಕುರಿತು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Key words: mysore- Three separate- Hunsur-road accidents –death – three member