Thursday, August 20, 2026

BDA Apartments

Home Crime ವ್ಯಾಪಾರಿಯನ್ನ ಅಡ್ಡಗಟ್ಟಿ  1.8 ಲಕ್ಷ ರೂ. ಹಣ ದೋಚಿದ ದರೋಡೆಕೋರರು…

ವ್ಯಾಪಾರಿಯನ್ನ ಅಡ್ಡಗಟ್ಟಿ  1.8 ಲಕ್ಷ ರೂ. ಹಣ ದೋಚಿದ ದರೋಡೆಕೋರರು…

ಮೈಸೂರು,ಫೆಬ್ರವರಿ,13,2021(www.justkannada.in):  ಸ್ಕೂಟರ್‌ನಲ್ಲಿ ವ್ಯಾಪಾರಿಯನ್ನು ಅಡ್ಡಗಟ್ಟಿದ ಸುಲಿಗೆಕೋರರು ವ್ಯಾಪಾರಿಯಿಂದ 1.8 ಲಕ್ಷ ಹಣವನ್ನ ದೋಚಿ ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.jk

ಮೈಸೂರಿನ ಚಾಮರಾಜ ಮೊಹಲ್ಲಾ ನಿವಾಸಿ, ಪ್ರೇಮ್ ಕುಮಾರ್ ಹಣ ಕಳೆದುಕೊಂಡವರು. ನಗರದ ದಳವಾಯಿ ಶಾಲೆ ಬಳಿ ರಾತ್ರಿ ಘಟನೆ ನಡೆದಿದೆ.

1-8-lakhs-robbery-dealer-gangsters-mysore
ಕೃಪೆ- internet

ಬಂಡಿ ಪಾಳ್ಯದ ಮಾತಾಜಿ ಟ್ರೆಡಿಂಗ್ ಅಂಗಡಿ ನಡೆಸುತ್ತಿದ್ದ ಪ್ರೇಮ್, ರಾತ್ರಿ ವ್ಯಾಪಾರ ಮುಗಿಸಿಕೊಂಡು ಮನೆಗೆ ತೆರಳುವಾಗ ದರೋಡೆಕೋರರು ಹಿಂಬಾಲಿಸಿಕೊಂಡು ಬಂದು ಜಗಳ ತೆಗೆದು ಲೂಟಿ ಮಾಡಿದ್ದಾರೆ. ಸ್ಥಳಕ್ಕೆ ಕೆ.ಆರ್. ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಲ್ಲೆ ನಡೆಸಿ ಹಣ ಕಿತ್ತುಕೊಂಡು ಹೋಗಿರುವ ದೃಶ್ಯ ಸಿಸಿ ಟಿವಿ ಕ್ಯಾಮಾರದಲ್ಲಿ ಸೆರೆಯಾಗಿದೆ.

Key words: 1.8 Lakhs –robbery- dealer – gangsters -mysore