Thursday, August 13, 2026

BDA Apartments

Home Cinema ಇಸ್ಟಾಗ್ರಾಂನಲ್ಲಿ ಲೈವ್’ನಲ್ಲಿ ಕಣ್ಣೀರು ಸುರಿಸಿದ ರಾಗಿಣಿ

ಇಸ್ಟಾಗ್ರಾಂನಲ್ಲಿ ಲೈವ್’ನಲ್ಲಿ ಕಣ್ಣೀರು ಸುರಿಸಿದ ರಾಗಿಣಿ

ಬೆಂಗಳೂರು, ಫೆಬ್ರವರಿ 12, 2021 (www.justkannada.in):

ಜೈಲಿನಿಂದ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಇಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದ ನಟಿ ರಾಗಿಣಿ ದ್ವಿವೇದಿ ಕಣ್ಣೀರು ಹಾಕಿದ್ದಾರೆ.

ಜೈಲಿನಿಂದ ಬಿಡುಗಡೆಯಾದ ಬಳಿಕ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ರಾಗಿಣಿ ಅಭಿಮಾನಿಗಳೊಂದಿಗೆ ಲೈವ್ ನಲ್ಲಿ ಸಂವಹನ ನಡೆಸಿದ್ದಾರೆ. ತಮ್ಮ ಕಷ್ಟದ ದಿನಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ.

ನನ್ನ ಪೋಷಕರು ಯಾರೂ ಎದುರಿಸಬಾರದ ನೋವು ಅನುಭವಿಸಿದರು. ಇದರಿಂದ ನಾನು ಮತ್ತಷ್ಟು ಗಟ್ಟಿಯಾಗಿದ್ದೇನೆ ಎಂದು ತಮ್ಮಮನದ ನೋವನ್ನು ಅಭಿಮಾನಿಗಳ ಮುಂದೆ ತೋಡಿಕೊಂಡಿದ್ದಾರೆ.

ಕಷ್ಟದ ದಿನಗಳಲ್ಲಿ ಪೋಷಕರು ಹಾಗೂ ಕುಟುಂಬದ ಬೆಂಬಲವನ್ನು ರಾಗಿಣಿ ಸ್ಮರಿಸಿದ್ದಾರೆ.