Sunday, August 23, 2026

BDA Apartments

Home Crime ಐಟಿ ಉದ್ಯೋಗಿ ಮೇಲೆ ಹಲ್ಲೆ ಮಾಡಿ ಹಣ ದೋಚಿದ್ಧ ಮೂವರು ದರೋಡೆಕೋರರು ಅಂದರ್…

ಐಟಿ ಉದ್ಯೋಗಿ ಮೇಲೆ ಹಲ್ಲೆ ಮಾಡಿ ಹಣ ದೋಚಿದ್ಧ ಮೂವರು ದರೋಡೆಕೋರರು ಅಂದರ್…

ಮೈಸೂರು,ಫೆಬ್ರವರಿ,11,2021(www.justkannada.in): ಐಟಿ ಉದ್ಯೋಗಿ ಮೇಲೆ ಹಲ್ಲೆ ಮಾಡಿ ಹಣ ದೋಚಿದ್ಧ ಮೂವರು ದರೋಡೆಕೋರರನ್ನ ಬಂಧಿಸುವಲ್ಲಿ  ಮೇಟಗಳ್ಳಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.jk

ಮೈಸೂರಿನ ಬೆಲವತ್ತ ಗ್ರಾಮದ ಪ್ರವೀಣ ಆರ್, ಮೈಸೂರಿನ ಬಿಎಂಶ್ರೀ ನಗರದ ಶಿವಕುಮಾರ್ ಎನ್, ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವಿ.ಪಿ ಬೋರೆ ನಿವಾಸಿ ರಘು  ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕನಾಗಿದ್ದು, ಆತನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಬಂಧಿತರಿಂದ 42, 000 ರೂ ನಗದು, 2 ದ್ವಿ ಚಕ್ರ ವಾಹನ, ಮೂರು ಮೊಬೈಲ್ ಫೋನ್‍ ಗಳನ್ನ ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳು ಐಟಿ ಉದ್ಯೋಗಿಯೊಬ್ಬರನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಾರಣಾಂತಿಕ ಹಲ್ಲೆ ಮಾಡಿ ಹಣ, ಬೈಕ್‍ ಅನ್ನು ಕಿತ್ತುಕೊಂಡು  ಪರಾರಿಯಾಗಿದ್ದರು. ಈ ಕುರಿತು ಪ್ರಕರಣ ದಾಖಲಾಗಿತ್ತು.three-gangsters-robbed-it-employee-arrest-mysore

ಮೈಸೂರು ನಗರ ಡಿಸಿಪಿ ಗೀತಾ ಪ್ರಸನ್ನ ಹಾಗೂ ನರಸಿಂಹರಾಜ ವಿಭಾಗದ ಎಸಿಪಿ ಶಿವ ಶಂಕರ್ ಮಾರ್ಗದರ್ಶನದಲ್ಲಿ ಮೇಟಗಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್  ಮಲ್ಲೇಶ್,  ಪಿಎಸ್ ಐಗಳಾದ ವಿಶ್ವನಾಥ್ , ನಾಗರಾಜ್ ನಾಯ್ಕ್ ಸೇರಿ ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Key words: Three -gangsters -robbed – IT employee- arrest-mysore