Sunday, August 2, 2026

BDA Apartments

Home Cinema ಕೊಲೆ ಪ್ರಕರಣ ಮತ್ತೆ ‘ಮೋಹನ್ ಲಾಲ್’ ಕುಟುಂಬದ ವಿಚಾರಣೆ !! ಕುತೂಹಲ ಮೂಡಿಸಿದ ‘ದೃಶ್ಯಂ 2’...

ಕೊಲೆ ಪ್ರಕರಣ ಮತ್ತೆ ‘ಮೋಹನ್ ಲಾಲ್’ ಕುಟುಂಬದ ವಿಚಾರಣೆ !! ಕುತೂಹಲ ಮೂಡಿಸಿದ ‘ದೃಶ್ಯಂ 2’ ಟೀಸರ್

ಬೆಂಗಳೂರು, ಫೆಬ್ರವರಿ 08, 2021 (www.justkannada.in): ಮೋಹನ್‌ಲಾಲ್ ನಟನೆಯ ‘ದೃಶ್ಯಂ 2’ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಬಿಡುಗಡೆ ದಿನಾಂಕವೂ ಪ್ರಕಟವಾಗಿದೆ.

ದೃಶ್ಯಂ ಸಿನಿಮಾ ಬ್ಲಾಕ್‌ಬಸ್ಟರ್‌ ಹಿಟ್‌ ಆಗಿತ್ತು. ಕನ್ನಡ, ಹಿಂದಿ ಸೇರಿದಂತೆ ಇತರೆ ಭಾಷೆಗಳಿಗೆ ರಿಮೇಕ್‌ ಕೂಡ ಆಗಿತ್ತು. ಈಗ ಆ ಸಿನಿಮಾದ ಎರಡನೇ ಭಾಗ ಸಿದ್ಧವಾಗಿದೆ. ಫೆ.19ರಂದು ಅಮೆಜಾನ್ ಪ್ರೈಂನಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಅಂದಹಾಗೆ ‘ದೃಶ್ಯಂ’ ಸಿನಿಮಾದಲ್ಲಿ ತನ್ನ ಕುಟುಂಬವನ್ನು ಕಾಪಾಡುವ ಸಲುವಾಗಿ ಒಂದು ಕೊಲೆ ಪ್ರಕರಣವನ್ನು ಬುದ್ಧಿವಂತಿಕೆಯಿಂದ ಮುಚ್ಚಿಹಾಕಿರುತ್ತಾರೆ ಕಥಾನಾಯಕ ಜಾರ್ಜ್‌ಕುಟ್ಟಿ.

ಅಂದು ಮಾಡಿದ ಕೊಲೆಯೇ ಈಗ ಮತ್ತೆ ಆ ಕುಟುಂಬವನ್ನು ಕಾಡಲು ಶುರುವಾಗಿದೆ. ಮೊದಲ ಪಾರ್ಟ್‌ ಎಲ್ಲಿಗೆ ಮುಗಿದಿತ್ತೋ ಅಲ್ಲಿಂದಲೇ ಎರಡನೇ ಪಾರ್ಟ್‌ ಕಥೆ ಆರಂಭ ಆಗಲಿದೆ ಎಂಬ ಅಂಶ ಟೀಸರ್ ನೋಡಿದವರಿಗೆ ಗೊತ್ತಾಗುತ್ತಿದೆ.

ತನ್ನ ಕುಟುಂಬವನ್ನು ಕಾಪಾಡಲು ಜಾರ್ಜ್‌ಕುಟ್ಟಿ ಇನ್ನೇನು ಮಾಡುತ್ತಾರೆ ಎಂಬ ವಿಷಯ ದೃಶ್ಯಂ2ನಲ್ಲಿ ಇರಲಿದೆ.