Friday, September 18, 2026

BDA Apartments

ವಿಶ್ವಕಪ್ ಕ್ರಿಕೆಟ್: ನಾಳೆ ಇಂಗ್ಲಿಷರ ವಿರುದ್ಧ ಟೀಂ ಇಂಡಿಯಾ ಹೋರಾಟ ! BDA JK_Adv BDA Adv
Home Front Page ವಿಶ್ವಕಪ್ ಕ್ರಿಕೆಟ್: ನಾಳೆ ಇಂಗ್ಲಿಷರ ವಿರುದ್ಧ ಟೀಂ ಇಂಡಿಯಾ ಹೋರಾಟ !

ವಿಶ್ವಕಪ್ ಕ್ರಿಕೆಟ್: ನಾಳೆ ಇಂಗ್ಲಿಷರ ವಿರುದ್ಧ ಟೀಂ ಇಂಡಿಯಾ ಹೋರಾಟ !

ಲಂಡನ್, ಜೂನ್ 29, 2019(www.justkannada.in): ವಿಶ್ವಕಪ್ ಕ್ರಿಕೆಟ್ ‘ನಲ್ಲಿ ನಾಳೆ (ಭಾನುವಾರ) ಭಾರತ-ಇಂಗ್ಲೆಂಡ್  ಪರಸ್ಪರ ಎದುರಾಗಲಿವೆ.

ಭಾರತದ ವಿರುದ್ಧ ಗೆಲುವು ಸಾಧಿಸಿದರೆ ಇಂಗ್ಲೆಂಡ್ ಸೆಮಿಫೈನಲ್ ಹಾದಿ ಸುಗಮವಾಗಲಿದೆ. ಇಂಗ್ಲೆಂಡ್ ವಿರುದ್ಧ ಗೆದ್ದರೆ ಭಾರತ ನೇರವಾಗಿ ಸೆಮಿಫೈನಲ್ ಗೆ ಪ್ರವೇಶ ಪಡೆಯಲಿದೆ. ಇಂಗ್ಲೆಂಡ್ ವಿರುದ್ಧ ಹೋರಾಟ ನಡೆಸಲು ಕೊಹ್ಲಿ ಪಡೆ ಸಜ್ಜಾಗಿದೆ.

ಈ ಮಧ್ಯೆ ಇಂಗ್ಲೆಂಡ್ ಆಫ್ ಸ್ಪಿನ್ನರ್ ಮೊಯಿನ್ ಅಲಿ, ವಿರಾಟ್ ಕೊಹ್ಲಿಗೆ ಸವಾಲು ಹಾಕಿದ್ದಾರೆ. ವಿರಾಟ್ ಕೊಹ್ಲಿಯವರನ್ನು ತಾವು ಔಟ್ ಮಾಡುವುದಾಗಿ ಮೊಯಿನ್ ಅಲಿ ಹೇಳಿದ್ದಾರೆ. ಕೊಹ್ಲಿ ಭಾರತಕ್ಕಾಗಿ ರನ್ ಗಳಿಸುವ ಗುರಿ ಹೊಂದಿದ್ದಾರೆ. ಅವರನ್ನು ಔಟ್ ಮಾಡಲು ನಾನಿದ್ದೇನೆಂದು ಮೊಯಿನ್ ಅಲಿ ಹೇಳಿದ್ದಾರೆ.