Friday, August 21, 2026

BDA Apartments

Home Cinema ಗೋಡ್ಸೆ ಪರ ಟ್ವೀಟ್: ಕಂಗನಾಗೆ ಚಾಟಿ ಬೀಸಿದ ನೆಟ್ಟಿಗರು!

ಗೋಡ್ಸೆ ಪರ ಟ್ವೀಟ್: ಕಂಗನಾಗೆ ಚಾಟಿ ಬೀಸಿದ ನೆಟ್ಟಿಗರು!

ಬೆಂಗಳೂರು, ಫೆಬ್ರವರಿ 01, 2020 (www.justkannada.in): ಗೋಡ್ಸೆ ಪರ ಟ್ವೀಟ್ ಮಾಡಿದ ಬಾಲಿವುಡ್‌ ನಟಿ ಕಂಗನಾ ರಣಾವತ್ ಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.

ನಮ್ಮ ಪಠ್ಯ ಪುಸ್ತಕಗಳಲ್ಲಿ ನಾಥೂರಾಮ್ ಗೋಡ್ಸೆಯನ್ನು ಬೇರೆ ರೀತಿ ಬಿಂಬಿಸಲಾಗಿದೆ ಎಂದು ಕಂಗನಾ ಟ್ವೀಟ್ ಮಾಡಿದ್ದರು. ಕಳೆದ ಅಕ್ಟೋಬರ್ ನಲ್ಲಿ ಕೂಡ ಸರ್ದಾರ್ ವಲ್ಲಭಬಾಯಿ ಪಟೇಲರನ್ನು ಹೊಗಳುವ ಭರದಲ್ಲಿ ಗಾಂಧೀಜಿಯನ್ನ ಪರೋಕ್ಷವಾಗಿ ತೆಗಳಿ ಪೋಸ್ಟ್ ಮಾಡಿದ್ದರು.

ಈ ಕುರಿತ ಎರಡೂ ಪೋಸ್ಟ್ ಗಳಿಗೂ ನೆಟ್ಟಿಗರು ತಿರುಗೇಟುಗಳನ್ನು ನೀಡಿದ್ದು, ಗೋಡ್ಸೆಯನ್ನು ಭಯೋತ್ಪಾದಕ ಎಂದು ವ್ಯಾಖ್ಯಾನಿಸಿದ್ದಾರೆ.

ಈ ಎರಡೂ ಟ್ವೀಟ್ ಗಳಿಗೆ ಸಂಬಂಧಿಸಿದಂತೆ ನೆಟ್ಟಿಗರು ಕಂಗನಾ ರಣಾವತ್ ಗೆ ಕಾಲೆಳೆದಿದ್ದಾರೆ.