Wednesday, August 12, 2026

BDA Apartments

Home Front Page ಮೈಸೂರು ವಿಮಾನ ನಿಲ್ದಾಣ ಶೀಘ್ರದಲ್ಲೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿ – ಹೀಗೆ ಹಾರೈಸಿದ್ದು ಯಾರು ಗೊತ್ತೆ..?

ಮೈಸೂರು ವಿಮಾನ ನಿಲ್ದಾಣ ಶೀಘ್ರದಲ್ಲೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿ – ಹೀಗೆ ಹಾರೈಸಿದ್ದು ಯಾರು ಗೊತ್ತೆ..?

ಮೈಸೂರು,ಜನವರಿ,30,2021(www.justkannada.in): ಮೈಸೂರು ವಿಮಾನ ನಿಲ್ದಾಣದ ಕಾರ್ಯವೈಖರಿಗೆ ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಮೈಸೂರು ವಿಮಾನ ನಿಲ್ದಾಣ ಶೀಘ್ರದಲ್ಲೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿ  ಎಂದು ಹಾರೈಸಿದ್ದಾರೆ.jk

ವಿಡಿಯೋ ಮೂಲಕ ಮೈಸೂರು ವಿಮಾನ ನಿಲ್ದಾಣದ ವ್ಯವಸ್ಥೆಗೆ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಏರ್ ಪೋರ್ಟ್ ನ ಸ್ವಚ್ಛತೆ ಕುರಿತು ಸಂತಸ ವ್ಯಕ್ತಪಡಿಸಿರುವ ಶ್ರೀಗಳು, ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಮೈಸೂರು ವಿಮಾನ ನಿಲ್ದಾಣದಲ್ಲಿ ಸಾಕಾರಗೊಳಿಸಲಾಗಿದೆ. ಮತ್ತಷ್ಟು ವಿಮಾನಗಳು ಮೈಸೂರು ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಲಿ. ಮತ್ತಷ್ಟು ಪ್ರಯಾಣಿಕರು ವಿಮಾನ ನಿಲ್ದಾಣದ ಸೇವೆಯನ್ನು ಪಡೆಯುವಂತಾಗಲಿ ಎಂದು ಹೇಳಿದರು.Mysore Airport- will soon - international airport- Ganapathi Sachidananda shri

ಹಾಗೆಯೇ ಶೀಘ್ರದಲ್ಲೇ ಮೈಸೂರು ವಿಮಾನ ನಿಲ್ದಾಣ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿ ಎಂದು ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಗಳು ಹಾರೈಸಿದರು.

Key words: Mysore Airport- will soon – international airport- Ganapathi Sachidananda shri