Friday, August 21, 2026

BDA Apartments

Home Front Page ICC Ranking: ಟೀಂ ಇಂಡಿಯಾ ನಂಬರ್ 1

ICC Ranking: ಟೀಂ ಇಂಡಿಯಾ ನಂಬರ್ 1

ಮ್ಯಾಂಚೆಸ್ಟರ್‌, ಜೂನ್ 28, 2019 (www.justkannada.in): ಭಾರತ ಏಕದಿನ ಕ್ರಿಕೆಟ್‌ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಇದುವರೆಗೆ ಅಗ್ರಸ್ಥಾನದಲ್ಲಿದ್ದ ಇಂಗ್ಲೆಂಡ್‌ ಈಗ, ಭಾರತ ವಿರುದ್ಧ ವಿಶ್ವಕಪ್‌ ಪಂದ್ಯಕ್ಕೆ ಮೂರು ದಿನಗಳು ಉಳಿದಿರುವಂತೆ ಎರಡನೇ ಸ್ಥಾನಕ್ಕಿಳಿದಿದೆ.

ಐಸಿಸಿ ಬಿಡುಗಡೆ ಮಾಡಿರುವ ತಾಜಾ ರ‍್ಯಾಂಕಿಂಗ್ ಭಾರತ 123 ಪಾಯಿಂಟ್‌ ಗಳಿಸಿದೆ. ಇಂಗ್ಲೆಂಡ್‌ 122 ಮತ್ತು ನ್ಯೂಜಿಲೆಂಡ್‌ 114 ಪಾಯಿಂಟ್‌ಗಳೊಡನೆ ಮೂರನೇ ಸ್ಥಾನದಲ್ಲಿವೆ.

ವಿಶ್ವಕಪ್‌ ಸೆಮಿಫೈನಲ್‌ಗೆ ಪ್ರವೇಶ ಪಡೆದ ಮೊದಲ ತಂಡ ವೆನಿಸಿರುವ ಆಸ್ಟ್ರೇಲಿಯಾ 112 ಪಾಯಿಂಟ್‌ಗಳೊಡನೆ ನಾಲ್ಕನೇ ಸ್ಥಾನದಲ್ಲಿದೆ.