Tuesday, September 29, 2026

BDA Apartments

ಫೆ.6ರಂದು ತಲಕಾವೇರಿಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ವಿಶೇಷ ಪೂಜೆ BDA JK_Adv B...
Home Front Page ಫೆ.6ರಂದು ತಲಕಾವೇರಿಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ವಿಶೇಷ ಪೂಜೆ

ಫೆ.6ರಂದು ತಲಕಾವೇರಿಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ವಿಶೇಷ ಪೂಜೆ

ಮಡಿಕೇರಿ, ಜನವರಿ 24, ಜನವರಿ 2021 (www.justkannada.in): ರಾಷ್ಟ್ರಪತಿ ರಾಮನಾಥ ಕೋವಿಂದ್‌ ತಲಕಾವೇರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಫೆ.6ರಂದು ಕೊಡಗಿಗೆ ಆಗಮಿಸುತ್ತಿರುವ ರಾಮನಾಥ ಕೋವಿಂದ್‌, ಮಡಿಕೇರಿಯ ಜನರಲ್‌ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟಿಸಲಿದ್ದಾರೆ.

ಬೆಳಿಗ್ಗೆ 10ರ ವೇಳೆಗೆ ತಲಕಾವೇರಿಯಲ್ಲಿ ವಿಶೇಷ ಪೂಜೆ ನೆರವೇರಿಸಲಿದ್ದಾರೆ. ಕೋವಿಡ್‌ ಕಾರಣದಿಂದ ಪ್ರೇಕ್ಷಕರಿಗೆ ಅವಕಾಶ ಇರುವುದಿಲ್ಲ.

ರಾಷ್ಟ್ರಪತಿ ಜೊತೆಗೆ, ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಸಹ ಮ್ಯೂಸಿಯಂ ಉದ್ಘಾಟನೆಗೆ ಬರುವ ಸಾಧ್ಯತೆಯಿದೆ.