Wednesday, September 30, 2026

BDA Apartments

ನಿಮ್ಮ ಅಪ್ಪನ ಮನೆಯಿಂದ ತಂದು ಕೊಡ್ತಾ ಇದ್ರಾ? : ರಾಜ್ಯ ಸರ್ಕಾರದ ವಿರುದ್ಧ ಸಿದ್...
Home Front Page ನಿಮ್ಮ ಅಪ್ಪನ ಮನೆಯಿಂದ ತಂದು ಕೊಡ್ತಾ ಇದ್ರಾ? : ರಾಜ್ಯ ಸರ್ಕಾರದ ವಿರುದ್ಧ ಸಿದ್ಧರಾಮಯ್ಯ ಕಿಡಿ

ನಿಮ್ಮ ಅಪ್ಪನ ಮನೆಯಿಂದ ತಂದು ಕೊಡ್ತಾ ಇದ್ರಾ? : ರಾಜ್ಯ ಸರ್ಕಾರದ ವಿರುದ್ಧ ಸಿದ್ಧರಾಮಯ್ಯ ಕಿಡಿ

ಮೈಸೂರು,ಜನವರಿ,13,2021(www.justkananda.in) : ಬಿಜೆಪಿಯವರು ಹಿಂದುಳಿದವರ, ಮಹಿಳಾ ಅಜೆಂಡಾ ವಿರೋಧಿಗಳು. ನಾನು 7 ಕೆಜಿ ಅಕ್ಕಿ ಕೊಟ್ಟೆ, ಈಗ 5 ಕೆಜಿಗೆ ಇಳಿಸಿದ್ದಿರಾ. ನಿಮ್ಮ ಅಪ್ಪನ ಮನೆಯಿಂದ ತಂದು ಕೊಡ್ತಾ ಇದ್ರಾ ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾಡಿದ್ದಾರೆ.jk-logo-justkannada-mysore

ಪಡಿತರ ಅಕ್ಕಿ ವಿತರಣೆಯಲ್ಲಿ 7 ಕೆಜಿ ಯಿಂದ 5 ಕೆಜಿ ಗೆ ಇಳಿಕೆ ಮಾಡಿರುವುದರ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ ಅವರು, ನಿಮ್ಮ ಅಪ್ಪನ ಮನೆಯಿಂದ ತಂದು ಕೊಡ್ತಾ ಇದ್ರಾ? ನಾನು ನನ್ನ ಅಪ್ಪನ ಮನೆಯಿಂದ ತಂದು ಕೊಡ್ತಾ ಇದ್ನಾ?,  ಕೆರೆಯ ನೀರನ್ನ ಕೆರೆಗೆ ಚೆಲ್ತ ಇದ್ದೇವು ಅಷ್ಟೇ. ಆದರೆ, ನಿವ್ಯಾಕೆ ಯೊಜನಗೆಳನ್ನ ಕಡಿತ ಮಾಡಿದ್ರಿ ಮಿಸ್ಟರ್ ಯಡಿಯೂರಪ್ಪ ಎಂದು ಪ್ರಶ್ನಿಸಿದ್ದಾರೆ.

“ಅಚ್ಚೇ ದಿನ್ ಬದಲು ಕೊರೊನ ಆಯೇಗಾ ಆಯ್ತು”

ಎಲ್ಲವನ್ನ ಲಾಕ್ ಮಾಡಿದ್ದೀರಾ. ಅನಲಾಕ್ ಮಾಡಿ ಅಂದ್ರೆ ದುಡ್ಡಿಲ್ಲ ಸರ್ ಅಂತೀರಾ. ಅಧಿಕಾರ ಬಿಡಿ ನಾವು ಅಧಿಕಾರ ಮಾಡ್ತೆವೇ ಅಂದ್ರೆ ನಾವೇ ಮಾಡ್ತವೇ ಅಂತಾರೆ ಭಂಡರು. ದೊಡ್ಡದಾಗಿ ನರೇಂದ್ರ ಮೋದಿ ಸಬ್ಕಾ ಸಾಥ್ ಸಬ್ಕಾ ವಿಕಾಸ ಅಂತ ಭಾಷಣ ಮಾಡ್ತಾರೆ. ಅಚ್ಚೇ ದಿನ್ ಆಯಾಗೆ ಅಂತಾರೆ, ಆದರೆ, ಅಚ್ಚೇ ದಿನ್ ಬದಲು ಕೊರೊನ ಆಯೇಗಾ ಆಯ್ತು ಎಂದು ವ್ಯಂಗ್ಯಮಾಡಿದರು.

ಇವರನ್ನ ಪ್ರಧಾನಿ ಮಾಡಿದ್ದು, ಪಕೋಡ ಮಾರೊಕ?

Your Dad,home,Bring,Give,State government,opposite,Siddaramaiah 

ಕೊರೊನ ಓಡಿಸಿ ಅಂದ್ರೆ ಗಂಟೆ ಬಡಿರಿ, ದೀಪ ಹಚ್ಚಿ ಅಂತಾರೆ. ಉದ್ಯೋಗ ಕೇಳಿದ್ರೆ ಪಕೋಡ ಮಾಡಿ ಅಂತಾರೆ. ಇವರನ್ನ ಪ್ರಧಾನಿ ಮಾಡಿದ್ದು, ಪಕೋಡ ಮಾರೊಕ? ಉದ್ಯೋಗ ಸೃಷ್ಟಿ ಮಾಡೋದಿರಲಿ, ಇರೋ ಉದ್ಯೋಗಗಳೇ ಕಿತ್ತುಕೊಂಡು ಹೋಗಿವೆ ಎಂದು ಟೀಕಿಸಿದರು.

key words : Your Dad-home-Bring-Give-State government-opposite- Siddaramaiah